×
Ad

ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಳಕ್ಕೆ ಆದೇಶ

Update: 2016-09-24 19:06 IST

ಬೆಂಗಳೂರು, ಸೆ. 24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ(ಕೆಎಸ್ಸಾರ್ಟಿಸಿ), ವಾಯವ್ಯ, ಈಶಾನ್ಯ, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ನಾಲ್ಕೂ ನಿಗಮಗಳ ನೌಕರರಿಗೆ 2015ರ ಡಿಸೆಂಬರ್ 31ರಂದು ಪಡೆಯುತ್ತಿದ್ದ ಮೂಲ ವೇತನಕ್ಕೆ ಅನ್ವಯವಾಗುವಂತೆ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಈ ಹೆಚ್ಚಳವು 2016ರ ಅಕ್ಟೋಬರ್ ತಿಂಗಳ ಸಂಬಳದಿಂದಲೇ ಜಾರಿಗೆ ಬರಲಿದ್ದು, ಈ ಹೆಚ್ಚಳದಿಂದ ನಾಲ್ಕೂ ವರ್ಷಗಳ ಅವಧಿಯಲ್ಲಿ 1,767 ಕೋಟಿ ರೂ.ಗಳಷ್ಟು ಆರ್ಥಿಕ ಹೊರೆಯಾಗಲಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News