ವಿಶ್ವ ಹಿಂದೂ ಪರಿಷತ್‌ನಿಂದ ಸಾಮೂಹಿಕ ದೀಪ ಲಕ್ಷ್ಮೀ ಪೂಜೆ
ಹಾಸನ,ಸೆ.24: ನಗರದ ಎಂ.ಜಿ. ರಸ್ತೆ ಬಳಿ ಇರುವ ಮಹಾವೀರ ಭವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶ್ವ ಹಿಂದೂ ಪರಿಷತ್‌ವತಿಯಿಂದ ಸಾಮೂಹಿಕ ದೀಪ ಲಕ್ಷ್ಮೀ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪೂಜೆಯಲ್ಲಿ 400ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಮಂತ್ರ ಪಠಣವನ್ನು ಹೇಳಿಕೊಟ್ಟಂತೆ ಮಹಿಳೆಯರು ಕೂಡ ಹೇಳುತ್ತಿದ್ದರು. ಭಕ್ತಯೊಂದಿಗೆ ಎಲ್ಲಾರಿಗೂ ಸುಖ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದರು.
ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯದರ್ಶಿ ಬಸವರಾಜು ಮಾತನಾಡಿ, ಭೂಮಿ ಮೇಲೆ ಇರುವ ಮನುಷ್ಯನಲ್ಲಿ ಮೇಲು ಕೀಳು ಎಂಬುದು ಬರಬಾರದು. ಸಮಾಜದಲ್ಲಿ ಎಲ್ಲಾರು ಒಂದೆ ಸಮಾನರು. ಅದರಂತೆ ಪ್ರತಿಯೊಬ್ಬರೂ ಸುಖ ಶಾಂತಿಯಿಂದ ನೆಮ್ಮದಿ ಜೀವನ ಸಾಗಿಸಬೇಕು ಎಂದರು. ಮನುಷ್ಯ ಮನುಷ್ಯನ ನಡುವೆ ಅಸೂಹೆ, ಧ್ವೇಷ ಮನೋಭಾವದಿಂದ ದೇಶದಲ್ಲಿ ಗಲಭೆಗಳು ಮತ್ತು ಕ್ರೌರ್ಯಗಳು ನಡೆಯುತ್ತಿದೆ.ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡದೆ ಅಣ್ಣ-ತಮ್ಮಂದಿರು, ಅಕ್ಕ ತಂಗಿಯರಂತೆ ಮನೋಬಾವ ಬೆಳೆಸಿಕೊಂಡರೇ ಒಳ್ಳೆಯ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು. ಇರುವ ಅಲ್ಪ ದಿವಸಗಳಲ್ಲಿ ನಾವು ಏನನ್ನು ಕೊಂಡೂಯ್ಯುವುದಿಲ್ಲ. ಗುರುತರ ಕೆಲಸ ಮಾಡಿದರೇ ಅದು ಶಾಶ್ವತವಾಗಿ ಉಳಿಯುತ್ತದೆ ಎಂದರು.
ಸಾಮೂಹಿಕ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಡಾ. ಭಾನುಪ್ರಕಾಶ್, ಕಾರ್ಯದರ್ಶಿ ಮಹಿಪಾಲ್, ಬಜರಂಗ ದಳದ ಪ್ರಮುಖ ಸುನೀಲ್, ಕಟ್ಟಾಯ ಶಿವಕುಮಾರ್, ಸಿ.ಎಸ್. ಕೃಷ್ಣಮೂರ್ತಿ, ಮಹಿಳಾ ಘಟಕದ ಪ್ರಮುಖ್ ಕಲಾವತಿ, ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ವೇಣುಗೋಪಾಲ್ ಇತರರು ಭಾಗವಹಿಸಿದ್ದರು.