×
Ad

ವಿದ್ಯಾರ್ಥಿನಿಯರಿಗೆ ಲೆಂಗಿಕ ಕಿರುಕುಳ ನೀಡಿದ ಆರೋಪ

Update: 2016-09-24 22:14 IST

  ಕಾರವಾರ, ಸೆ.24: ನಗರದ ಹಿಂದೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಆಮಾತುಗೊಂಡು ಮರು ನೇಮಕ ಗೊಂಡಿರುವ ಶಿಕ್ಷಕನ್ನು ವರ್ಗಾಯಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳ ಪೋಷಕರು ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.

ಇಲ್ಲಿನ ಹಿಂದೂ ಪ್ರೌಢ ಶಾಲೆಯ ಕನ್ನಡ ಪ್ರಾಧ್ಯಾಪಕ ಬಸವರಾಜ್ ಕಂದಾರಿ ಎಂಬವರೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಅಮಾನತುಗೊಂಡು ಮರು ನೇಮಕಗೊಂಡವರು.

ಶಿಕ್ಷಕ ಕಂದಾರಿ ಕಳೆದ ಫೆ.10 ರಂದು ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಅಮಾನತು ಮಾಡಲಾಗಿತ್ತು. ಆದರೆ, ಆರೋಪಿ ಅಧ್ಯಾಪಕ ಶಾಲೆಗೆ ಹಾಜರಾಗಿರುವುದನ್ನು ಕಂಡ ವಿದ್ಯಾರ್ಥಿಗಳ ಪೋಷಕರು ಕಾರವಾರ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಸವರಾಜ್ ಕಂದಾರಿ ಅವರು ಮರಳಿ ಶಾಲೆಗೆ ಬಂದಿರುವುದರಿಂದ ಮಕ್ಕಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮಕ್ಕಳು ಶಾಲೆಗೆ ಹೋದರೂ ತರಗತಿಗೆ ಹಾಜರಾಗುತ್ತಿಲ್ಲ ಶಾಲೆಗೆ ತೆರಳಲು ಭಯವಾಗುತ್ತಿದೆ ಎನ್ನುತ್ತಿದ್ದಾರೆ ಎಂದು ನಿರ್ದೇಶಕರ ಗಮನಕ್ಕೆ ತಂದ ಪಾಲಕರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕ ಕಂದಾರಿಯವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದರು.

 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಶಿಕ್ಷಕ ಕಂದಾರಿ ಈ ಹಿಂದೆ ಪುತ್ತೂರು ತಾಲೂಕಿನ ಗೊಟ್ಟೆಂಪಾಡಿ ಶಾಲೆಯೊಂದರಲ್ಲಿ ಕರ್ತವ್ಯದಲ್ಲಿರುವಾಗ ಅಲ್ಲಿಯೂ ಇದೇ ರೀತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣ ಇಲ್ಲಿಗೆ ವರ್ಗಾಯಿಸಲಾಗಿತ್ತು. ಇಲ್ಲಿಯೂ ಅದೇ ಪ್ರವೃತ್ತಿ ಮುಂದುವರಿಸಿರುವ ಕಂದಾರಿಯನ್ನು ಶೀಘ್ರ ಹಿಂದೂ ಪ್ರೌಢಶಾಲೆಯಿಂದ ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ನಡೆದಿದ್ದೇನು:    ಕಳೆದ ಫೆ.10ರಂದು ಹಿಂದೂ ಹೈಸ್ಕೂಲ್ ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದ ಕಾರಣ ನಗರ ಠಾಣೆಯ ಪೊಲೀಸರು ಶಿಕ್ಷಕ ಬಸವರಾಜ್ ಕಂದಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಹುದ್ದೆಯಿಂದ ಸರಿಯಬೇಕೆಂಬ ದೃಷ್ಟಿಯಿಂದ ಇಲ್ಲ ಸಲ್ಲದ ಆರೋಪ ತನ್ನ ಮೇಲೆ ಹಾಕಲಾಗುತ್ತಿದೆ. ವಿದ್ಯಾರ್ಥಿಗಳ ತಲೆ ಕೆಡಿಸಿದ್ದಾರೆ. ಮುಖ್ಯೊಪಾಧ್ಯಾಯ ಹುದ್ದೆ ಬಿಟ್ಟುಕೊಡು ಎಂದು ಸಾಕಷ್ಟು ಜೀವ ಬೆದರಿಕೆ ಕರೆಗಳು ಬಂದಿವೆ. ಕಳೆದ 2-3 ತಿಂಗಳಿಂದ ವೇತನ ನೀಡಿಲ್ಲ. ಇದರಿಂದಾಗಿ ಜೀವನ ನಿರ್ವಹಣೆ ದುಸ್ತರವಾಗಿದೆ. ಅಮಾನತು ಅವಧಿ ಮುಗಿದ ಬಳಿಕ ಶಾಲೆಗೆ ಹಾಜರಾಗಲು ಬಿಟ್ಟಿಲ್ಲ. ಹಾಜರಾಗದಿದ್ದರೆ ವಿನಾಕಾರಣ ನೋಟಿಸು ನೀಡುತ್ತಾರೆ. ಹಾಜರಾದ ಮೇಲೆ ಮತ್ತೆ ಮಕ್ಕಳಿಂದ ಹೆದರಿಸಿ, ಪಾಲಕರನ್ನು ತನ್ನ ಮೇಲೆ ಎತ್ತಿ ಕಟ್ಟಿದ್ದಾರೆ. ಯಾವುದೂ ಬೇಡ ಎಂದು ಬೇರೆ ಕಡೆ ತೆರಳಿದದರೆ ಅಲ್ಲಿಗೂ ದೂರವಾಣಿ ಮೂಲಕ ಕರೆ ಮಾಡಿ ತನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ತಾವು ಯಾವುದೇ ತಪ್ಪು ಮಾಡಿಲ್ಲ.

ಬಸವರಾಜ್ ಕಂದಾರಿ, ಹಿಂದೂ ಪ್ರೌಢಶಾಲೆಯ ಶಿಕ್ಷಕ ಶಿಕ್ಷಕ ಕಂದಾರಿ ವಿರುದ್ಧ ತಾವು ಕ್ರಮಕೈಗೊಳ್ಳುವ ಅಧಿಕಾರವಿಲ್ಲ. ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಪಾಲಕರು ನೀಡಿದ ದೂರನ್ನು ಮೇಲಧಿಕಾರಿಗೆ ಕಳುಹಿಸಿ, ಪತ್ರ ಬರೆಯುತ್ತೇನೆ. ಶಿಕ್ಷಕ ಬಸವರಾಜ್ ಕಂದಾರಿ ಮೇಲಿರುವ ಆರೋಪದ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News