ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ; ದ್ವೀಪವಾದ ಮುತ್ತಗಾ ಗ್ರಾಮ
Update: 2016-09-25 10:14 IST
ಕಲಬುರಗಿ, ಸೆ.25: ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಮುತ್ತಗಾ ಗ್ರಾಮ ಜಲಾವೃತಗೊಂಡಿದ್ದು, ಕಳೆದ ಮೂರು ದಿನಗಳಿಂದ ವಿದ್ಯುತ್, ರಸ್ತೆ ಸಂಪರ್ಕ ಕಡಿದು ಹೋಗಿದೆ.
ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮಕ್ಕೆ ಕಾಗಿಣಾ ನದಿಯ ನೆರೆ ನೀರು ನುಗ್ಗಿದೆ. ಮುತ್ತಗಾ ಗ್ರಾಮ ದ್ವೀಪವಾಗಿ ಪರಿಣಮಿಸಿದೆ.
ಮೂರು ದಿನಗಳಿಂದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಪ್ರವಾಹ ತಗ್ಗಿದ್ದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಎರಡು ಸೇತುವೆಗಳು ಜಲಾವೃತಗೊಂಡಿದೆ.
ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮಲಖೇಡ್ ಮತ್ತು ದಂಡೋತಿ ಸೇತುವೆ ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿದು ಹೋಗಿದೆ.