ಸೊರಬ: ಅಕ್ರಮ ಶ್ರೀಗಂಧ ಮರದ ದಿಮ್ಮಿ ಸಾಗಾಟ
ಸೊರಬ, ಸೆ.25: ಅಕ್ರಮವಾಗಿ ಶ್ರೀಗಂಧ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಿ, ಸೊತ್ತುವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಬಂಧಿತರನ್ನು ತಾಲೂಕಿನ ಅಲಗೋಡು ಗ್ರಾಮಸ್ಥರಾದ ಸತೀಶ್ (30), ನಾಗರಾಜ (40), ರಾಮಚಂದ್ರಪ್ಪ(45) ಎಂದು ಗುರುತಿಸಲಾಗಿದೆ. ಸಾಗರ ಆರ್‌ಟಿಒ ರಸ್ತೆ ಬಳಿಯ ನಿವಾಸಿ ಮೇಘರಾಜ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಬೆಳಗ್ಗಿನ ಜಾವ ಆರೋಪಿಗಳು ಬರಗಿ ಎಂಬಲ್ಲಿಂದ ಮೂರು ಶ್ರೀಗಂಧದ ಮರಗಳನ್ನು ಕಡಿದು ದ್ವಿಚಕ್ರವಾಹನದಲ್ಲಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಅರಿತ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ಅವರ ನೇತೃತ್ವದ ಪೊಲೀಸ್ ತಂಡ ಮೂವರು ಆರೋಪಿಗಳನ್ನು ಬಂಧಿಸಿ, 34 ಕೆ.ಜಿ. ತೂಕದ ಸುಮಾರು 1.5 ಲಕ್ಷ ರೂ. ಬೆಲೆಬಾಳುವ 8 ತುಂಡು ಶ್ರೀಗಂಧ ಮರದ ತುಂಡು ಮತ್ತು ಬೈಕೊಂದನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಸಾಗರ ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಾಳಿಯ ವೇಳೆ ವಲಯ ಅರಣ್ಯಾಧಿಕಾರಿ ಅಜಯ್ ಕುಮಾರ್ ಎಂ.ಎಸ್., ಉಪ ವಲಯ ಅರಣ್ಯಾಧಿಕಾರಿಗಳಾದ ಹನುಮಂತಪ್ಪ ಎನ್.ಯು., ರಾಮಪ್ಪ ಎಸ್, ಅರಣ್ಯ ರಕ್ಷಕರಾದ ರಮೇಶ್, ಪ್ರವೀಣ, ಸೋನು ಹಾಜರಿದ್ದರು.