×
Ad

ಪರಿಸರ ಸಂರಕ್ಷಣೆಗೆ ಕೈ ಜೋಡಿಸಿ: ಎಸ್.ಜಿ.ನಾಗೇಶ್

Update: 2016-09-26 22:03 IST

ಚಿಕ್ಕಮಗಳೂರು, ಸೆ.26: ಪರಿಸರ ಉಳಿದಾಗ ಮಾತ್ರ ನಮ್ಮೆಲ್ಲರ ಉಳಿವು. ಪರಿಸರ ಸಂರಕ್ಷಣೆಯಲ್ಲಿ ನಾವೆಲ್ಲರೂ ಅಗತ್ಯವಾಗಿ ಕೈಜೋಡಿಸಿ ಪರಿಸರದ ಉಳಿವಿಗೆ ಶ್ರಮಿಸಬೇಕೆಂದು ಜಿಲ್ಲಾ ಶಿಕ್ಷಣಾಧಿಕಾರಿ ಎಸ್.ಜಿ.ನಾಗೇಶ್ ಹೇಳಿದರು.

ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಯಟ್- ಚಿಕ್ಕಮಗಳೂರು ಮತ್ತು ಜಿಲ್ಲಾ ವಿಜ್ಞ್ಞಾನ ಕೇಂದ್ರ, ಕರಾವಿಪ ಘಟಕ ಆಶ್ರಯದಲ್ಲಿ ಪರಿಸರ ಮಿತ್ರ ಶಾಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಿ.ರಾಜಪ್ಪ ಶಿಕ್ಷಕರ ಸ್ವಮೌಲ್ಯಮಾಪನ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

 ಸಮನ್ವಯಾಧಿಕಾರಿ ಎಚ್.ಎಂ.ಓಂಕಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಮಿತ್ರ ಶಾಲಾ ಕಾರ್ಯಕ್ರಮದ ಬಗ್ಗೆ ಸವಿವರವಾಗಿ ತಿಳಿಸಿದರು.

  

ಕಾರ್ಯಕ್ರಮದಲ್ಲಿ ಜಿ.ವಿ.ಕೇಂದ್ರದ ಅಧ್ಯಕ್ಷ ಎಚ್.ಎಂ.ನೀಲಕಂಠಪ್ಪ ಹಾಗೂ ಸಂಯೋಜಕ ಟಿ.ಜಿ.ಕೆ ಅರಸ್ ಮಕ್ಕಳ ವಿಜ್ಞಾನ ಸಮಾವೇಶದ ಕುರಿತು ವಿವರವಾಗಿ ಶಿಕ್ಷಕರಿಗೆ ಮಾಹಿತಿ ನೀಡಿದರು. ಜಿಲ್ಲಾ ಸಂಯೋಜಕ ನೀಲಕಂಠಪ್ಪ ಕೆ.ಜಿ. ಮಕ್ಕಳ ಸಮಾವೇಶದ ಪ್ರಾಮುಖ್ಯತೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಜಿಲ್ಲಾ ವಿಜ್ಞ್ಞಾನ ಕೇಂದ್ರದ ಪದಾಧಿಕಾರಿಗಳಾದ ಸತ್ಯನಾರಾಯಣ, ಲೋಕೇಶ್, ಸಂಪನ್ಮೂಲ ವ್ಯಕ್ತಿಗಳಾದ ಧರಣೇಂದ್ರ ಮೂರ್ತಿ, ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೀಲಕಂಠಪ್ಪ ನಿರೂಪಿಸಿ, ಅರಸ್ ಸ್ವಾಗತಿಸಿದರು. ಧರಣೇಂದ್ರ ಮೂರ್ತಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News