ಕೆಆರ್‌ಎಸ್ ಖಾಲಿ ಖಾಲಿ..!!
Update: 2016-09-26 23:38 IST
ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳ ಪಾಲಿಗೆ ಜೀವನಾಡಿಯಾಗಿರುವ ಕಾವೇರಿ ಕಣಿವೆ ಭಾಗದ ಪ್ರಮುಖ ಅಣೆಕಟ್ಟುಗಳ ಪೈಕಿ ಒಂದಾಗಿರುವ ಕೃಷ್ಣರಾಜಸಾಗರ ಜಲಾಶಯ ಬತ್ತಿಹೋಗಿದ್ದು, ಈಗಿರುವ ಕನಿಷ್ಠ ಪ್ರಮಾಣದ ನೀರು ಹೊರತುಪಡಿಸಿದರೆ ಜಲಾಶಯದ ವಿಸ್ತೀರ್ಣ ಇರುವೆಡೆ ಎಲ್ಲಿ ನೋಡಿದರೂ ಕೇವಲ ಕಲ್ಲು ಬಂಡೆಗಳೆ ಕಾಣಿಸುತ್ತಿವೆ.ಕೃಷ್ಣರಾಜಸಾಗರ(ಕೆಆರ್‌ಎಸ್)ದಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ, ಡೆಡ್ ಸ್ಟೋರೇಜ್ 4.401 ಟಿಎಂಸಿ. ಇವತ್ತು ಜಲಾಶಯದಲ್ಲಿ 14.602 ಟಿಎಂಸಿ ಮಾತ್ರ ಲಭ್ಯವಿದೆ. ಇದರಲ್ಲಿ ಉಪಯೋಗಕ್ಕೆ ಲಭ್ಯವಾಗುವುದು ಕೇವಲ 6.223 ಟಿಎಂಸಿ ಮಾತ್ರ. ಪ್ರತಿ ತಿಂಗಳು ಕುಡಿಯಲು 2 ಟಿಎಂಸಿಯಂತೆ ಮುಂದಿನ ಮೇ ವರೆಗೆ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.