ಪ.ಜಾತಿ ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳಿ’್ಳ: ಡಾ.ಮೋಟಮ್ಮ
ಮೂಡಿಗೆರೆ, ಸೆ.27: ಇಂದಿನ ವೇಗದ ಮತ್ತು ವೈಜ್ಞ್ಞಾನಿಕ ಯುಗದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ನಮ್ಮ ಪರಿಶಿಷ್ಟ ಸಮಾಜದ ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳವುದು ಅತೀ ಮುಖ್ಯ ಹಾಗೂ ಅನಿವಾರ್ಯ ಎಂದು ಎಂಎಲ್ಸಿ, ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಡಾ.ಮೋಟಮ್ಮ ತಿಳಿಸಿದರು.
ಅವರು ಪಟ್ಟಣದ ವಿದ್ಯಾನಗರದ ಸಂಘದ ನೋಂದಾಯಿತ ಕಚೇರಿ ಆವರಣದಲ್ಲಿ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರಿ ಸಂಘದ 2015-16ನೆ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚೈತನ್ಯ ಸಹಕಾರಿ ಸದಸ್ಯರಲ್ಲಿ ಮಿತವ್ಯಯ ಸಾಧಿಸಲು ಬ್ಯಾಂಕಿಂಗ್ ವ್ಯವಸ್ಥೆ, ಸ್ವಸಹಾಯ ಹಾಗೂ ಸಹಕಾರಿ ಮನೋಭಾವನೆಗಳನ್ನು ಪ್ರೋತ್ಸಾಹಿಸಲು ಮೋಟಾರು ವಾಹನ, ಯಂತ್ರೋಪಕರಣ ಹೈನುಗಾರಿಕೆ, ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ವ್ಯಾಪಾರ ವಹಿವಾಟು, ಸ್ವಯಂ ಉದ್ಯೋಗ, ಗೃಹಪಯೋಗಿ ಸಾಲ ಸೇರಿದಂತೆ ಹತ್ತು ಹಲವಾರು ಉದ್ದೇಶಗಳನ್ನೊಳಗೊಂಡು ನೂತನವಾಗಿ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರಿ ಸಂಘವನ್ನು ನೋಂದಣಿ ಮಾಡಲಾಗಿದೆ ಎಂದು ಹೇಳಿದರು.
ವರದಿ ವರ್ಷದ ಅಂತ್ಯಕ್ಕೆ 1,187 ಸದಸ್ಯರಿದ್ದು ಇದುವರೆಗೆ 1,300 ಸದಸ್ಯರಿದ್ದು, ವರದಿ ಸಾಲಿನಲ್ಲಿ ಸಂಘವು 37.85.599 ರೂ. ವಹಿವಾಟು ನಡೆಸಿದೆ. 1,120 ಮಹಿಳಾ ಸದಸ್ಯರಿಗೆ ಸರಕಾರ 500 ಷೇರಿನಂತೆ ಸಹಾಯಧನ 5,60,000 ರೂ. ಬಿಡುಗಡೆ ಮಾಡಿದೆ. ಅಲ್ಲದೆ ಠೇವಣಿ ರೂಪದಲ್ಲಿ 9,07,580 ರೂ. ಸಂಗ್ರಹಿಸಲಾಗಿದೆ. ವಾರ್ಷಿಕ ವರ್ಷಕ್ಕೆ 76,097 ರೂ. ನಿವ್ವಳ ಲಾಭದಲ್ಲಿದೆ. ನಮ್ಮ ಸಹಕಾರಿ ಸಂಘದಲ್ಲಿ 45 ಮಹಿಳಾ ಸ್ವಸಹಾಯ ಸಂಘಗಳಿದ್ದು, 10 ಸ್ವಸಹಾಯ ಸಂಘಗಳಿಗೆ 5 ಲಕ್ಷಕ್ಕೂ ಅಧಿಕ ಸಾಲ ವಿತರಣೆ ಮಾಡಲಾಗಿದೆ. 42 ಬಿಡಿ ಸದಸ್ಯರು ಸೇರಿದಂತೆ ಒಟ್ಟು 21,15,000 ರೂ. ಸಾಲ ನೀಡಲಾಗಿದೆ. ಈ ಸಂಘಕ್ಕೆ ಎಲ್ಲ್ಲ ಪರಿಶಿಷ್ಟ ಮಹಿಳೆಯರು ಸದಸ್ಯತ್ವ ಪಡೆದುಕೊಂಡು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಯೋಗೇಶ್, ಉಪಾಧ್ಯಕ್ಷೆ ಎಚ್.ಎಂ.ಜಯಲಕ್ಷ್ಮಿ ಸೇರಿದಂತೆ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.