×
Ad

ಬೃಹತ್ ಪುಸ್ತಕ ಮೇಳಕ್ಕೆ ಚಾಲನೆ

Update: 2016-09-27 22:34 IST

 ಕಾರವಾರ, ಸೆ.27: ಇಲ್ಲಿನ ಮಿತ್ರ ಸಮಾಜ ಸಭಾಭವನದ ಮುಂಭಾಗದಲ್ಲಿ ಆರಂಭಗೊಂಡಿರುವ ಬೃಹತ್ ಪುಸ್ತಕ ಮೇಳ ಹಾಗೂ ಮಾರಾಟಕ್ಕೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಚಾಲನೆ ನೀಡಿದರು.

ನವಕರ್ನಾಟಕ ಪುಸ್ತಕ ಪ್ರದರ್ಶನದ ವತಿಯಿಂದ ಎರಡು ತಿಂಗಳುಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ ಕಡಿಮೆ ಬೆಲೆಯಲ್ಲಿ ಪ್ರಮುಖ ಪುಸ್ತಕಗಳು ಲಭ್ಯವಾಗಲಿವೆ. ಸಾಮಾನ್ಯ ಜ್ಞಾನ, ವೈದ್ಯಕೀಯ, ಯೋಗ, ಪ್ರಬಂಧ, ಕಥೆ, ಕವನ, ಸಾಹಿತ್ಯ, ಪೌರಾಣಿಕ ಸೇರಿದಂತೆ ವಿವಿಧ ಕವಿಗಳು ಹಾಗೂ ಲೇಖಕರ ಸುಮಾರು 50 ಸಾವಿರ ಪುಸ್ತಕಗಳು ಈ ಒಂದೇ ಮಳಿಗೆಯಲ್ಲಿ ಲಭ್ಯವಾಗಲಿವೆೆ. ವ್ಯವಸ್ಥಾಪಕ ದೇಜಪ್ಪ ಪುಸ್ತಕ ಪ್ರದರ್ಶನವನ್ನು ಆಯೋಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News