×
Ad

ಮಳೆ ಕೊರತೆಗೆ ಉತ್ತರ ಕನ್ನಡ ತತ್ತರ; ಕೋಟ್ಯಂತರ ರೂ. ಹಾನಿ

Update: 2016-09-27 22:47 IST

ಕಾರವಾರ, ಸೆ.27: ಪ್ರಸಕ್ತ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆ ಮಳೆ ಶೇ.20ರಷ್ಟು ಕಡಿಮೆಯಾಗಿದ್ದರಿಂದ ಕೃಷಿ ಇಲಾಖೆಯ ಪ್ರಾಥಮಿಕ ಸಮೀಕ್ಷೆಯಂತೆ ಶಿರಸಿ, ಮುಂಡಗೋಡ ಹಳಿಯಾಳ ಹಾಗೂ ಸಿದ್ದಾಪುರದಲ್ಲಿ ಕೋಟ್ಯಂತರ ರೂ. ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ವಾಡಿಕೆ ಮಳೆಯಂತೆ ಜಿಲ್ಲೆಯಲ್ಲಿ ಸೆಪ್ಟೆಂಬರ್ 25ರ ವರೆಗೆ ಒಟ್ಟು 2,551 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಈ ಬಾರಿ 2,052 ಮಿ.ಮೀ. ಮಳೆಯಾಗಿದೆ. ಹಳಿಯಾಳ (ಶೇ.59)ರಾಜ್ಯದಲ್ಲಿಯೇ ಅತೀ ಹೆಚ್ಚು ಮಳೆ ಕೊರತೆ ಎದುರಿಸಿದ ತಾಲೂಕು ಎಂದು ಗುರುತಿಸಲಾಗಿದೆ.

 ವಾಡಿಕೆಯಂತೆ ಅಂಕೋಲಾದಲ್ಲಿ 3,246 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ವರೆಗೆ 2,650ರಷ್ಟು ಮಳೆಯಾಗಿದೆ. ಭಟ್ಕಳದಲ್ಲಿ ಸಾಂಪ್ರದಾಯಿಕ 3,885 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈವರೆಗೆ 3,017 ಮಿ.ಮೀ. ಮಳೆಯಾಗಿದೆ. 1, 663 ಮಿ.ಮೀ ಮಳೆಯಾ ಗುತ್ತಿದ್ದ ಹಳಿಯಾಳದಲ್ಲಿ ಈ ವರೆಗೆ 687 ಮಿ.ಮೀ. ಮಳೆಯಾಗಿದೆ. ಹೊನ್ನಾವರದಲ್ಲಿ 3,355 ಮಿ.ಮೀ. ಆಗಬೇಕಿದ್ದ ಮಳೆ, ಈ ವರೆಗೆ 3,149 ಮಿ.ಮೀ. ವರ್ಷಧಾರೆಯಾಗಿದೆ. ಕಾರವಾರದಲ್ಲಿ 2,962 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 2,702 ಮಿಮೀ. ಮಳೆಯಾಗಿದೆ. 3,281 ಮಳೆಯಾಗಬೇಕಿದ್ದ ಕುಮಟಾದಲ್ಲಿ ಈ ಬಾರಿ 2,76   8 ಮಿ.ಮೀ ಮಳೆಯಾಗಿದೆ. ಮುಂಡಗೋಡದಲ್ಲಿ 1,329 ಮಿ.ಮೀ. ವರ್ಷಧಾರೆಯಾಗುತ್ತಿದ್ದು, ಈ ಬಾರಿ 789 ಮಿ.ಮೀ. ಮಳೆಯಾಗಿದೆ. ಸಿದ್ದಾಪುರದಲ್ಲಿ 2,610 ಮಿ.ಮೀ. ನಿಂದ 2, 365 ಕ್ಕೆ ಮಳೆಯ ಪ್ರಮಾಣ ಇಳಿಕೆಯಾಗಿದೆ. ಶಿರಸಿಯಲ್ಲಿ 2,160 ಮಿ.ಮೀ. ಮಳೆಯಾಗುತ್ತಿದ್ದು, 1,816 ಮಿ.ಮೀ ಮಳೆಯಾಗಿದೆ. ಜೊಯಿಡಾದಲ್ಲಿ 2,313 ಮೀ.ಮೀ. ಮಳೆಯ ಬದಲಾಗಿ 2, 171 ಮಿ.ಮೀ. ಮಳೆಯಾಗಿದೆ. ಯಲ್ಲಾಪುರದಲ್ಲಿ 2, 575 ಮಿ.ಮೀ. ಮಳೆಯಾಗುತ್ತಿದ್ದಲ್ಲಿ 1,445 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಶೇ.20 ರಷ್ಟು ಮಳೆಯ ಅಭಾವ ಕಂಡಿದೆ. ಮಳೆಯ ಕೊರತೆ, ತೇವಾಂಶ ಆಧರಿಸಿ ಬರ ಪೀಡಿತ ಪ್ರದೇಶ ಘೋಷಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರದಲ್ಲಿ ಶೇ.40 ಕ್ಕಿಂತ ಹೆಚ್ಚು ಮಳೆಯ ಕೊರತೆ ಕಂಡಿರುವುದರಿಂದ ಸರಕಾರ ಈ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕೆಂದು ಘೋಷಿಸುವ ಬಗ್ಗೆ ಪರಿಶೀಲನೆ ನಡೆಸಬೇಕು.

ಬೆಳೆ ಹಾನಿ ಸಮೀಕ್ಷೆ

: ಪ್ರಾ ಥಮಿಕ ವರದಿಯ ಪ್ರಕಾರ ಮಳೆ ಕಡಿಮೆಯಾಗಿರುವುದರಿಂದ ಶಿರಸಿ, ಮುಂಡಗೋಡ, ಹಳಿಯಾಳ ಹಾಗೂ ಸಿದ್ದಾಪುರ ತಾಲೂಕಿನಲ್ಲಿ ಒಟ್ಟು 1,336.74 ಲಕ್ಷ ರೂ. ನಷ್ಟ ಸಂಭವಿಸಿದೆ. ಶಿರಸಿ ತಾಲೂಕಿನಲ್ಲಿ 324.36 ಲಕ್ಷ ರೂ. ಮುಂಡಗೋಡ ತಾಲೂಕಿನಲ್ಲಿ 578.00 ಲಕ್ಷ ರೂ. ಹಳಿಯಾಳದಲ್ಲಿ 216.78 ಲಕ್ಷ ರೂ., ಹಾಗೂ ಸಿದ್ದಾಪುರದಲ್ಲಿ 217.60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಇಲಾಖೆ ಸಮೀಕ್ಷಾ ಕಾರ್ಯವನ್ನು ಮುಂದುವರಿದೆ.

<

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News