×
Ad

ಜಿ.ಪದ್ಮಾವತಿ ಬೆಂಗಳೂರಿನ ನೂತನ ಮೇಯರ್

Update: 2016-09-28 13:04 IST

ಬೆಂಗಳೂರು, ಸೆ. 28:ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ)  ನೂತನ ಮೇಯರ್‌  ಆಗಿ ಕಾಂಗ್ರೆಸ್ ನ ಜಿ.ಪದ್ಮಾವತಿ ಆಯ್ಕೆಯಾಗಿದ್ದಾರೆ.

ಬಿಬಿಎಂಪಿ ಮೇಯರ್‌ ಮತ್ತು ಉಪ ಮೇಯರ್‌ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಕಾಶ್ ನಗರ ವಾರ್ಡ್ ನ ಸದಸ್ಯೆ ಜಿ.ಪದ್ಮಾವತಿ ಅವರು ಬಿಜೆಪಿಯ ಡಿಎಚ್ ಲಕ್ಷ್ಮೀ ಅವರನ್ನು 22 ಮತಗಳ ಅಂತರದಿಂದ ಮಣಿಸಿ  ಮೇಯರ್ ಆಗಿ ಆಯ್ಕೆಯಾದರು.

   ಜಿ.ಪದ್ಮಾವತಿ ಅವರು ಬಿಬಿಎಂಪಿ 50ನೆ ಮೇಯರ್ .ಬಿಬಿಎಂಪಿಯಲ್ಲಿ ಅಧಿಕಾರ ಹಂಚಿಕೊಳ್ಳಲು   ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು,  ಕಾಂಗ್ರೆಸ್ ನ ಜಿ.ಪದ್ಮಾವತಿ  142 ಮತಗಳನ್ನು  ಮತ್ತು  ಬಿಜೆಪಿಯ ಡಿಎಚ್ ಲಕ್ಷ್ಮೀ   120 ಮತಗಳನ್ನು ಪಡೆದರು. ರಾಧಾಕೃಷ್ಣ ದೇವಾಲಯ ವಾರ್ಡ್‌ ಸದಸ್ಯ ಎಂ ಆನಂದ್  ಉಪ ಮೇಯರ‍್ ಆಗಿ ಆಯ್ಕೆಯಾದರು. 

ಮತದಾನ ನಿರಾಕರಣೆ:  ಮೇಯರ‍್  ಚುನಾವಣೆಗೆ  ತಡವಾಗಿ ಬಂದದಕ್ಕೆ ಬಿಜೆಪಿಯ ಸಂಸದರಾದ ರಾಜೀವ ಚಂದ್ರಶೇಖರ್ ಮತ್ತು ಪಿ.ಸಿ. ಮೋಹನ್ ಅವರಿಗೆ ಮತದಾನ ನಿರಾಕರಿಸಲಾಗಿತ್ತು.
ಚುನಾವಣಾಧಿಕಾರಿ  ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ  ಮತದಾನ ನಿರಾಕರಿಸಿದರು. ಇದರಿಂದಾಗಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಹಂತದಲ್ಲಿ ಬಿಜೆಪಿ -ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು  ಪರಸ್ಪರ ಘೋಷಣೆ  ಕೂಗಿದರು. 

ಬಿಜೆಪಿ ಸಭಾತ್ಯಾಗ:  ಇಬ್ಬರು ಸಂಸದರಿಗೆ ಮತದಾನ ನಿಕಾರಕರಿಸಿದಕ್ಕೆ   ಕೋಪಗೊಂಡ ಬಿಜೆಪಿ ಸದಸ್ಯರು  ನಿಯಮಾವಳಿಯ ಪುಸ್ತಕದ ಪ್ರತಿಗಳನ್ನು ಹರಿದು ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರ ಮೇಜಿನತ್ತ ಎಸೆದು ಸಭಾ ತ್ಯಾಗ  ಮಾಡಿದರು. ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆಯುವಾಗ ಹೆದರಿ ಓಡಿ ಹೋಗುತ್ತಿದ್ದೀರಾ ? ಎಂದು ಕಾಂಗ್ರೆಸ್ ಸದಸ್ಯರು ಲೇವಡಿ ಮಾಡಿದರು.

ನಮಗೆ ಕಾವೇರಿ ಮುಖ್ಯ:  ಮುಖ್ಯ ಮಂತ್ರಿ ಕರೆದಿದ್ದ ಸರ್ವಪಕ್ಷ ಸಭೆಗೆ ಹಾಜರಾಗಿರುವ ಕಾರಣದಿಂದಾಗಿ ಸಭೆಗೆ ಬರುವಾಗ ತಡವಾಗಿದೆ. ನಮಗೆ ಕಾವೇರಿ ಮುಖ್ಯ   ಎಂದು ಪಿ.ಸಿ. ಮೋಹನ್ ಹೇಳಿದಾಗ ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. "ಇಷ್ಟು ದಿನ ಇಲ್ಲದ ಕಾವೇರಿ ಪ್ರೀತಿ ಈಗ ಹೇಗೆ ಬಂತು ?" ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News