ನ್ಯಾಕ್ ಸಮಿತಿಯಿಂದ ‘ಬಿ’ ಗ್ರೇಡ್ ಮಾನ್ಯತೆ
Update: 2016-09-28 21:59 IST
ಕಾರವಾರ, ಸೆ.28: ನಗರದ ಬಾಡಾದಲ್ಲಿನ ಶಿವಾಜಿ ಕಾಲೇಜಿಗೆ ರಾಷ್ಟ್ರೀಯ ವೌಲ್ಯಾಂಕನ ಮತ್ತು ಅಂಗೀಕಾರ ಪರಿಷತ್ ಸಮಿತಿಯವರು ‘ಬಿ’ ಗ್ರೇಡ್ ಮಾನ್ಯತೆ ನೀಡಿದೆ. ಈ ಹಿಂದೆ ಶಿವಾಜಿ ಶಿಕ್ಷಣ ಮಹಾವಿದ್ಯಾನಿಲಯಕ್ಕೆ ಭೆೇಟಿ ನೀಡಿ ಕಾಲೇಜಿನ ಮೂಲಭೂತ ಸೌಕರ್ಯಗಳು, ವಿವಿಧ ವಿಭಾಗಗಳು, ಹಾಲಿ ಹಾಗೂ ಹಳೆ ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸದಸ್ಯರು, ಪಾಲಕರು, ಸಾರ್ವಜನಿಕರು ಮತ್ತು ಪ್ರಾಯೋಗಿಕ ಪಾಠ ಶಾಲೆಗಳ ಮುಖ್ಯಾಧ್ಯಾಪಕರೊಡನೆ ಸಮಾಲೋಚನೆ ನಡೆಸಿದ ರಾಷ್ಟ್ರೀಯ ವೌಲ್ಯಾಂಕನ ಮತ್ತು ಅಂಗೀಕಾರ ಪರಿಷತ್ ಸದಸ್ಯರು, ಮುಂದಿನ ಐದು ವರ್ಷದ ಅವಧಿಗೆ ‘ಬಿ’ ಗ್ರೇಡ್ ನೀಡಿದ್ದಾರೆ. ಇದರಿಂದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯವು ಪ್ರಥಮ ಬಾರಿಗೆ ನ್ಯಾಕ್ ಮಾನ್ಯತೆಗೆ ಒಳಪಟ್ಟಿದೆ. ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಆಗಮಿಸಿದ ನ್ಯಾಕ್ ಸಮಿತಿಯ ಪ್ರೊ. ಡಿ.ಎನ್.ಸನ್‌ಸನ್‌ವಾಲ, ಮಿಥಿಲಾ ದೇವಕಾರುಣ್ಯಮ್ ಹಾಗೂ ಪ್ರೊ. ಅಮಿತಾ ಕೌಟ್ಸ್ ಪರಿಶೀಲನೆ ನಡೆಸಿದ್ದರು.