×
Ad

ಭತ್ತದ ಫಸಲು ನಾಶ

Update: 2016-09-28 22:06 IST

ಸುಂಟಿಕೊಪ್ಪ, ಸೆ. 28: ಸುಂಟಿಕೊಪ್ಪಸಮೀಪದ ಕಂಬಿಬಾಣೆ ಗ್ರಾಪಂ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಕಷ್ಟ ಪಟ್ಟು ಬೆಳೆದಿದ್ದ ಭತ್ತದ ಫಸಲು ಆನೆಗಳ ದಾಳಿಗೆ ನೆಲಕಚ್ಚಿ ಹೋಗಿದೆೆ.

   ಕಂಬಿಬಾಣೆ ಗ್ರಾಮದ ನಿವಾಸಿ ಆಜಡ್ಕ ವಾಸುದೇವ ಎಂಬವರ ಗದ್ದೆಗೆ ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಕಾಡಾನೆಯೊಂದು ಲಗ್ಗೆಯಿಡುತ್ತಿದ್ದು, ಬೆಳೆದ ಫಸಲು ಸಂಪೂರ್ಣವಾಗಿ ಕಾಡಾನೆಯ ಉಪಟಳದಿಂದ ಹಾನಿಗೊಂಡಿದೆ. ಸೋಮವಾರ ರಾತ್ರಿಯು ಮತ್ತೇ ಬಂದು ಗದ್ದೆಯಲ್ಲಿ ಬೆಳೆದ ಭತ್ತದ ಫಸಲನ್ನು ತಿಂದು ಹೋಗಿದೆ. ಇದರಿಂದ ಸುಮಾರು 25,000 ರೂ. ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೃಷಿಕ ವಾಸುದೇವ, ಭತ್ತವನ್ನು ಮಾರುವುದಕ್ಕೆ ಬದಲಾಗಿ ತಮಗೆ ದಿನನಿತ್ಯದ ಬಳಕೆಗೂ ಕಾಡಾನೆಗಳು ಫಸಲನ್ನು ಬಿಡುತ್ತಿಲ್ಲ ಇದರಿಂದ ಬದುಕು ಕಷ್ಟಕರವಾಗಲಿದೆ ಎಂದು ಅಳಲನ್ನು ತೋಡಿಕೊಂಡರು.

ಕೂಡಲೇ ಅರಣ್ಯ ಇಲಾಖೆಯವರು ಈ ಭಾಗದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವುದರೊಂದಿಗೆ ಕೃಷಿಕರನ್ನು ಬದುಕುವುದಕ್ಕೆ ಅವಕಾಶ ಮಾಡಿಕೊಡಿ ಎಂದು ವಾಸುದೇವ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News