×
Ad

ಚಲೋ ಉಡುಪಿ ಆಂದೋಲನಕ್ಕೆ ಉದಾರ ದೇಣಿಗೆ‌ ನೀಡಲು ಮನವಿ

Update: 2016-09-29 15:48 IST

ಆತ್ಮೀಯರೇ,

"ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ‌ಹಕ್ಕು"  ಘೋಷಣೆಯಡಿ ಅ.4ರಿಂದ 9ರವರೆಗೆ ನಾವು ಹಮ್ಮಿಕೊಂಡಿರುವ 'ಚಲೋ ಉಡುಪಿ' ಜಾಥಾ ಹಾಗೂ ಐತಿಹಾಸಿಕ ಬೃಹತ್ ಸಮಾವೇಶಕ್ಕೆ ನಾಡಿನಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ ಅ.9ರ ಉಡುಪಿ ಸಮಾವೇಶದಲ್ಲಿ ಗುಜರಾತಿನ ಊನಾ ಹೋರಾಟದ ರೂವಾರಿ ಜಿಗ್ನೇಶ್ ಮೆವಾನಿ ಭಾಗವಹಿಸಲಿದ್ದಾರೆ.
ಚಲೋ ಉಡುಪಿಗಾಗಿ ನಾಡಿನ ಉದ್ದಗಲಕ್ಕೂ ಸಿದ್ಧತೆಗಳು, ಸಭೆಗಳು ನಡೆಯುತ್ತಿವೆ.

ಇಡೀ ಆಂದೋಲನವನ್ನು ನಡೆಸಲು  ತನು- ಮನದ ಬೆಂಬಲದ ಜೊತೆಗೆ ಧನ ಬಲದ ಅಗತ್ಯವಿದೆ.  

  • ಬೆಂಗಳೂರಿನಲ್ಲಿ ಜಾಥಾದ ಉದ್ಘಾಟನಾ ಸಮಾವೇಶ,  
  •  200ಕ್ಕೂ ಹೆಚ್ಚು ಕಾರ್ಯಕರ್ತರ ಆರು ದಿನಗಳ ವಾಹನ ಜಾಥಾ, 
  • ಪ್ರಚಾರ ಸಾಮಗ್ರಿಗಳು ಹಾಗಣು ಸಾಂಸ್ಕೃತಿಕ ಪರಿಕರಗಳು,
  • ಉಡುಪಿಯ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಸುಮಾರು 25,000 ಜನರಿಗೆ ಊಟ, ವೇದಿಕೆಯ ಖರ್ಚು,
  • ಸಂವಹನ - ಸಂಪರ್ಕಗಳ ಖರ್ಚು, 
  •  ಪ್ರಯಾಣದ ಖರ್ಚು

ಹೀಗೆ ನಾನಾ ಖರ್ಚು ವೆಚ್ಚಗಳಿಗೆ ಅಪಾರ ಪ್ರಮಾಣದ ಹಣಬೆಂಬಲವೂ ಅತ್ಯಗತ್ಯ. ಹಲವಾರು ಯುವಜನರು ಈ ಆಂದೋಲನದಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ ಎಂಬುದೂ ಅತ್ಯಂತ ಮುಖ್ಯವಾದದ್ದು.

ಈ ಹೋರಾಟಕ್ಕೆ ಶ್ರೀಮಂತರು, ಸೈದ್ಧಾಂತಿಕ ವಿರೋಧಿಗಳು ಹಾಗೂ  ರಾಜಕೀಯ ಪಕ್ಷಗಳಿಂದ ಹಣ ತೆಗೆದುಕೊಳ್ಳುವುದು ಬೇಡ.  ಈ ಹೋರಾಟದಲ್ಲಿ ನಂಬಿಕೆ ಇರುವ ಹಾಗೂ ಭಾಗವಹಿಸುವವರಿಂದಲೇ ಸಂಗ್ರಹವಾಗುವುದು ಹೆಚ್ಚು ಅರ್ಥ ಪೂರ್ಣ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಈ ಹಿನ್ನೆಲೆಯಲ್ಲಿ ನಿಮ್ಮೆಲ್ಲರಲ್ಲಿ ಮನವಿ:  
ಈ ಆಂದೋಲನಕ್ಕೆ ಕೈ ಜೋಡಿಸಿರುವ ಎಲ್ಲರೂ ಉದಾರವಾಗಿ, ನಿಮ್ಮಿಂದ ಸಾಧ್ಯವಾಗುವ ಗರಿಷ್ಠ ಮಟ್ಟದ ಹಣ ಸಹಾಯವನ್ನು ನೀಡಬೇಕು. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎನ್ನುವಂತೆ, ಎಲ್ಲರೂ ತಮ್ಮಿಂದಾದಷ್ಟು ಹಣ ಒದಗಿಸಿದರೆ ಅದು ದೊಡ್ಡ ಮೊತ್ತವಾಗುತ್ತದೆ. 

ಇದೊಂದು ವಿನೂತನ ಪ್ರಯೋಗ. ಹಣಕ್ಕಾಗಿ ಸಿರಿವಂತರಲ್ಲಿ ಕೈ ಒಡ್ಡುವ ಬದಲು ಸ್ವಾಭಿಮಾನದಿಂದ
ಸಂಗ್ರಹಿಸಿದ ಮೊತ್ತದಲ್ಲಿ ಚಳವಳಿ ರೂಪಿಸೋಣ.

ಚಲೋ ಉಡುಪಿ ಫೇಸ್ ಬುಕ್,  ವಾಟ್ಸಾಪ್ ಗ್ರೂಪುಗಳಲ್ಲಿ  ಇರುವ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕೆಂದು ಕೋರುತ್ತೇವೆ.   ಜೊತೆಗೆ, ಸ್ನೇಹಿತರನ್ನೂ ದೇಣಿಗೆ ನೀಡುವಂತೆ ಪ್ರೇರೇಪಿಸಿ.

'ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ' ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಹಣಕಾಸು ಸಮಿತಿ ಇದನ್ನು ನೋಡಿಕೊಳ್ಳುತ್ತದೆ.  ಒಟ್ಟು ಸಂಗ್ರಹ ಮತ್ತು ವೆಚ್ಚದ ಲೆಕ್ಕಪತ್ರಗಳೆಲ್ಲವೂ ಪಾರದರ್ಶಕವಾಗಿರುತ್ತವೆ.

*ಹಣ ಸಹಾಯ ಮಾಡಿ, ಚಳವಳಿ ಬೆಂಬಲಿಸಿ, ಸ್ವಾಭಿಮಾನಗಳ ಸಂಘರ್ಷವನ್ನು ಯಶಸ್ವಿಗೊಳಿಸಿ*.

ಇಂತಿ 
*ಚಲೋ ಉಡುಪಿ ಬಳಗ*

ಬ್ಯಾಂಕ್ ಖಾತೆಯ ವಿವರ:

*Account Number: 
0413101503582

*Name:* DALITHA DAMANITHARA SWABHIMANI HORATA SAMITHI
*Bank Name*: Canara  Bank, Town Hall Branch, Bangalore 
*IFSC code*: CNRB0000413

*ಸಂಪರ್ಕ:* ಅಖಿಲಾ- 9845250955

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor