ಸತ್ಯ ಗೊತ್ತಾಗಲಿ ಎಂದು ತಜ್ಞರ ಸಮಿತಿಗೆ ಒತ್ತಾಯ: ಸಿಎಂ
ಹೊಸದಿಲ್ಲಿ, ಸೆ.29: ‘‘ನಾವು ಸತ್ಯ ಗೊತ್ತಾಗಲೆಂದು ತಜ್ಞರ ಸಮಿತಿಯನ್ನು ಎರಡೂ ರಾಜ್ಯಕ್ಕೆ ಕಳುಹಿಸಿಕೊಡುವಂತೆ ನಾವು ಮನವಿ ಮಾಡಿದ್ದೆವು. ಆದರೆ, ನಮ್ಮ ಈ ಒತ್ತಾಯಕ್ಕೆ ತಮಿಳುನಾಡು ಸರಕಾರ ಅಸಮ್ಮತಿ ವ್ಯಕ್ತಪಡಿಸಿದೆ’’ ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
‘‘ನಾವು ಸುಪ್ರೀಂಕೋರ್ಟ್ ಆದೇಶ ಪಾಲನೆಯಲ್ಲಿ ನಕಾರಾತ್ಮಕ ಧೋರಣೆ ತಳೆದಿರಲಿಲ್ಲ. ಕೋರ್ಟ್ ತೀರ್ಪಿಗೆ ತಲೆ ಬಾಗಿ ಮೊದಲಿಗೆ ನೀರನ್ನು ಬಿಟ್ಟಿದ್ದೇವೆ. ಆದರೆ, ಇದೀಗ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಮುಂದಿನ ನಿರ್ಧಾರವನ್ನು ರಾಜ್ಯಕ್ಕೆ ಮರಳಿದ ಬಳಿಕ ತೆಗೆದುಕೊಳ್ಳುವೆ’’ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
‘‘ನಾವು ಸುಪ್ರೀಂಕೋರ್ಟ್ ಸಲಹೆಯಂತೆ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿ ಮಧ್ಯಸ್ಥಿಕೆ ಸಭೆ ನಡೆಸಿದ್ದು, ತಜ್ಞರ ತಂಡ ಕಳುಹಿಸಬೇಕೆಂಬ ಕರ್ನಾಟಕದ ಸಲಹೆಗೆ ತಮಿಳುನಾಡು ಒಪ್ಪಿಗೆ ನೀಡಿಲ್ಲ. ನಾವು ಎರಡೂ ರಾಜ್ಯಗಳ ಅಭಿಪ್ರಾಯವನ್ನು ಪಡೆದಿದ್ದೇವೆ. ಸಭೆಯಲ್ಲಿ ನಡೆದ ಚರ್ಚೆಯ ಮಾಹಿತಿಯನ್ನು ಅಟಾರ್ನಿ ಜನರಲ್ ಮೂಲಕ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡುತ್ತೇವೆ’’ ಎಂದು ಉಮಾಭಾರತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಮಾಭಾರತಿಯವರ ಈ ಹೇಳಿಕೆಯಿಂದಾಗಿ ಕರ್ನಾಟಕ-ತಮಿಳುನಾಡಿನ ಸಂಧಾನ ಮಾತುಕತೆ ಬಹುತೇಕ ವಿಫಲವಾದಂತಾಗಿದೆ.