×
Ad

ಇಂಜಿನಿಯರ್ ಕೊಲೆ ಪ್ರಕರಣ: 6 ಮಂದಿಯ ಬಂಧನ

Update: 2016-09-29 22:22 IST

ದಾವಣಗೆರೆ, ಸೆ.29: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ಓರ್ವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 6 ಜನರನ್ನು ಬಂಧಿಸಲಾಗಿದೆ ಎಂದು ಡಾ. ಭೀಮಾಶಂಕರ ಗುಳೇದ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಗೀಡಾದ ಮಲ್ಲೇಶಪ್ಪನವರ ಸಹೋದರನ ಹೆಂಡತಿ ಮಂಜುಳಾ, ಕರಣ್, ಟಿ.ಗೌತಮ್, ಆರ್.ಸತೀಶ್ ಕುಮಾರ್, ಮಾಂತೇಶ, ಎಂ.ಬಿ. ಕೇರಿಯ ಸಂತೋಷ್, ಬಂಧಿತ ಆರೋಪಿಗಳು.

ಕಳೆದ ಸೆ. 17ರಂದು ನಗರದ ದೇವರಾಜ್ ಅರಸ್ ಬಡಾವಣೆಯ ನಿವಾಸಿ ಕೆ.ವಿ. ಮಲ್ಲೇಶಪ್ಪ ಅವರ ಮೃತ ದೇಹ ಕೆರೆಬಿಳಚಿ ಗ್ರಾಮದ ಬಳಿ ತುಂಗಾ ನಾಲೆಯೊಂದರಲ್ಲಿ ಪತ್ತೆಯಾಗಿತ್ತ್ತು. ಈ ಸಂಬಂಧ ಮೃತ ಮಲ್ಲೇಶಪ್ಪನವರ ಪುತ್ರ ತಮ್ಮ ತಂದೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆ. 19ರಂು ನಾಲೆಯಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಶವ ತನ್ನ ತಂದೆಯದೇ ಎಂದು ಅವರು ಗುರುತಿಸಿದ ಹಿನ್ನೆಲೆಯಲ್ಲಿ, ಪ್ರಕರಣದ ಜಾಡು ಹಿಡಿದು ಹೊರಟಾಗ ಮಲ್ಲೇಶಪ್ಪನವರ ಸಾವು ಸಹಜವಲ್ಲ, ಇದೊಂದು ಕೊಲೆ ಎಂಬುದು ತಿಳಿದು ಬಂದಿತ್ತು. ಮಲ್ಲೇಶಪ್ಪನ ಪುತ್ರನ ದೂರಿನ ಹಿನ್ನೆಲೆಯಲ್ಲಿ ಮಂಜುಳಾ ಮತ್ತು ಇತರ ಐವರನ್ನು ಬಂಧಿಸಿ ವಿಚಾರಣೆಗೆ ಗುರಿ ಪಡಿಸಿದಾಗ ಆರೋಪಿಗಳು ತಪ್ಪು ಒಪ್ಪಿಕೊಂಡಿರುವುದಾಗಿ ಎಸ್ಪಿ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಟಿಗೊಡಿ, ಡಿವೈಎಸ್ಪಿ ಅಶೋಕ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News