ಖ್ಯಾತ ಮನೋವೈದ್ಯ ಡಾ.ಅಶೋಕ್ ಪೈ ಇನ್ನಿಲ್ಲ
Update: 2016-09-30 11:05 IST
ಶಿವಮೊಗ್ಗ, ಸೆ.30: ಖ್ಯಾತ ಮನೋವೈದ್ಯ, ಸಾಹಿತಿ, ಚಲನಚಿತ್ರ ನಿರ್ಮಾಪಕ ಡಾ.ಕೆ.ಎ.ಅಶೋಕ್ ಪೈ ಇಂದು ಸ್ಕಾಟ್ಲೆಂಡ್‌ನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.
ಅವರಿಗೆ 69 ವರ್ಷ ವಯಸ್ಸಾಗಿತ್ತು.
ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷರಾಗಿದ್ದ ಡಾ.ಅಶೋಕ್ ಪೈಯವರು ಶಿವಮೊಗ್ಗದಲ್ಲಿ ಮಾನಸ ನರ್ಸಿಂಗ್ ಹೋಮ್ ಎಂಬ ಮಾನಸಿಕ ರೋಗಗುಣ ಪಡಿಸುವ ಆಸ್ಪತ್ರೆ ಮತ್ತು ಮಾನಸ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದರು
‘ಪ್ರಥಮ ಉಷಾಕಿರಣ’, ‘ಆಘಾತ’, ‘ಕಾಡಿನ ಬೆಂಕಿ’ ಸೇರಿದಂತೆ ಅನೇಕ ಮನೋವೈಜ್ಞಾನಿಕ ಸಿನೆಮಾಗಳನ್ನು ನಿರ್ಮಾಣ ಮಾಡಿ ಖ್ಯಾತರಾಗಿದ್ದರು. ‘ಕಾಡಿನ ಬೆಂಕಿ’ ಚಿತ್ರವು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರೆ, ಪ್ರಥಮ ಉಷಾಕಿರಣ ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತ್ತು.
ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.