ಉಡುಪಿ ಚಲೋ: ಸಿಂಧನೂರಿನಲ್ಲಿ ಸಮಾಲೋಚನಾ ಸಭೆ
Update: 2016-09-30 20:53 IST
ರಾಯಚೂರು, ಸೆ.30: ಆಹಾರ ನಮ್ಮ ಆಯ್ಕೆ, ಭೂಮಿ ನಮ ಹಕ್ಕು ಘೋಷಣೆಯಡಿ ಅ.4ರಿಂದ 9ರವರೆಗೆ ಹಮ್ಮಿಕೊಂಡಿರುವ ಚಲೋ ಉಡುಪಿ ರಾಜ್ಯಮಟ್ಟದ ಜಾಥಾ ಹಾಗೂ ಐತಿಹಾಸಿಕ ಬೃಹತ್ ಸಮಾವೇಶದ ಕುರಿತು ಸಮಾಲೋಚನಾ ಸಭೆ ಸಿಂಧನೂರಿನಲ್ಲಿ ನಡೆಯಿತು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಲಿತ, ಎಡಪಂಥೀಯ, ಪ್ರಗತಿಪರ, ಅಲ್ಪಸಂಖ್ಯಾತ ಸಂಘಟನೆಗಳು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದವು.
ಪ್ರಮುಖರಾದ ಎಚ್.ಎನ್.ಬಡಿಗೇರ್, ಎಸ್.ದೇವೇಂದ್ರಗೌಡ, ಬಸವರಾಜ ಹಳ್ಳಿ, ಬಸವರಾಜ ಬಾದರ್ಲಿ, ಸಮದ್ ಚೌದ್ರಿ, ನಾಗರಾಜ ಪೂಜಾರ್, ಬಿ.ಎನ್ ಯರದಿಹಾಳ ,ಶಂಕ್ರರ ಗುರಿಕಾರ, ಯಕೂಬ್ ಆಲಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.