ಹಕ್ಕುಗಳು ಕಾನೂನು ಚೌಕಟ್ಟಿನಲ್ಲಿರಲಿ: ಫಾ.ಓಲೇರಿಯನ್
ಕಾರವಾರ, ಸೆ.30: ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಮಾನವ ತನ್ನನ್ನು ತಾನು ಅರಿತುಕೊಳ್ಳಬೇಕು. ಪ್ರತಿಯೊಬ್ಬನಿಗೂ ಹಕ್ಕು ಹಾಗೂ ಕರ್ತವ್ಯವಿದೆ, ಅದರ ಬಗ್ಗೆ ಸೂಕ್ತ ರೀತಿಯಲ್ಲಿ ತಿಳಿದುಕೊಳ್ಳಬೇಕು ಎಂದು ಕೆಥೊಲಿಕ್ ಧರ್ಮ ಪ್ರಾಂತದ ಫಾ.ಓಲೇರಿಯನ್ ಸಿಕ್ವೇರಾ ಹೇಳಿದರು.
ಅವರು ನಗರದ ಕೆಡಿಡಿಸಿ ಸಭಾಂಗಣದಲ್ಲಿ ನಡೆದ ‘ಸಾಮಾಜಿಕ ಅಭಿವೃದ್ಧಿಗೆ ಹಕ್ಕುಗಳ ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಇಲ್ಲದಿದ್ದರೆ ಹಕ್ಕುಗಳಿಗೆ ಬೆಲೆ ಇಲ್ಲ. ಪ್ರತಿಯೊಬ್ಬರು ಸ್ವಾವಲಂಬಿಯಾಗಿ ಬದುಕಬೇಕಾಗಿದೆ ಎಂದ ಅವರು, ಶೋಷಣೆ, ದೌರ್ಜನ್ಯ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ ಆವಶ್ಯಕತೆ ಇದೆ ಎಂದರು.
ಬೆಂಗಳೂರಿನ ಕ್ರಾಸ್ ಸಂಸ್ಥೆಯ ಸೆಬಾಸ್ಟಿಯನ್ ಫೆರ್ನಾಂಡಿಸ್ ಮಾತನಾಡಿ, ಮನುಷ್ಯ ಪುಸ್ತಕವಿದ್ದಂತೆ. ಅದರಲ್ಲಿ ಪ್ರಥಮ ಹಾಗೂ ಕೊನೆಯ ಪುಟವನ್ನು ದೇವರು ಬರೆದಿರುತ್ತಾನೆೆ. ಮಧ್ಯದ ಪುಟಗಳನ್ನು ನಾವೇ ಬರೆದುಕೊಳ್ಳಬೇಕು. ಹಕ್ಕುಗಳು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಅನೇಕ ಕಡೆಗಳಲ್ಲಿ ಹಕ್ಕು ಉಲ್ಲಂಘನೆಯಾಗುತ್ತಿದೆ. ಹಕ್ಕಿದೆ ಎಂದ ಮಾತ್ರಕ್ಕೆ ್ವೇಚ್ಛಾಚಾರದಿಂದ ವರ್ತಿಸಬಾರದು. ಕಾನೂನು ಚೌಕಟ್ಟಿನಲ್ಲಿ ಹಕ್ಕುಗಳ ಪ್ರಯೋಗವಾಗಬೇಕು. ನಮ್ಮ ಹಕ್ಕನ್ನು ಬೇರೆಯವರು, ಬೇರೆ ಯವರ ಹಕ್ಕನ್ನು ನಾವು ಕಸಿದುಕೊಳ್ಳಲು ಅವಕಾಶವಿಲ್ಲ ಎಂದರು.
ಸಮಾಜ ಸೇವಕಿ ಅನು ಕಳಸ ಮಾತನಾಡಿ, ಸಮಾನತೆ, ಸ್ವಾತಂತ್ರ್ಯ, ಶೋಷಣೆ ವಿರುದ್ಧ, ಶೈಕ್ಷಣಿಕ ಹಕ್ಕು ಹೀಗೆ ಹತ್ತು ಹಲವಾರು ಹಕ್ಕುಗಳಿವೆೆ. ಎಲ್ಲವನ್ನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ದಿನನಿತ್ಯಕ್ಕೆ ಬೇಕಾದ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಚಿಕ್ಕವರಿದ್ದಾಗಿನಿಂದಲೇ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಕ್ಯಾಪ್ಟನ್ ರುಡಾಲ್ಫ್ ಡಿಕೊಸ್ತಾ, ಪರಿವೀಕ್ಷಣಾ ಕೇಂದ್ರದ ಪ್ರೇಮಲತಾ ತಾಂಡೇಲ್, ಜಸ್ಟಿನ್ ಡಿಸೋಜ, ಸೈಮನ್ ಟೆಲಿಸ್ ಮತ್ತಿತರರಿದ್ದರು.