ಅಂಕೋಲಾ: ಎನ್‌ಸಿಸಿಯಿಂದ ಸ್ವಚ್ಛತಾ ಸಪ್ತಾಹ
Update: 2016-09-30 22:16 IST
ಅಂಕೋಲಾ, ಸೆ.30: ಪಿಎಮ್ ಪ್ರೌಢಶಾಲೆಯ ಎನ್‌ಸಿಸಿ ಘಟಕದ ವತಿಯಿಂದ 29 ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಕಾರವಾರ ಇದರ ಆದೇಶದಂತೆ ಸ್ವಚ್ಛತಾ ಸಪ್ತಾಹದ ಅಂಗವಾಗಿ ಪಿಎಂ ಹೈಸ್ಕೂಲ್ ಎದುರಿನ ರಸ್ತೆಯನ್ನು ಸ್ವಚ್ಛಗೊಳಿಸುವುದರ ಮೂಲಕ ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ಪ್ರಾಚಾರ್ಯ ಆರ್.ವಿ. ಕೇಣಿ ಅವರ ಮಾರ್ಗದರ್ಶನದಲ್ಲಿ ಎನ್‌ಸಿಸಿ ಕಮಾಂಡರ್ ಜಿ.ಆರ್. ತಾಂಡೇಲ ಸ್ವಚ್ಛತಾ ಸಪ್ತಾಹದ ನೇತೃತ್ವ ವಹಿಸಿದ್ದರು. ಶಿಕ್ಷಕರಾದ ಪ್ರಕಾಶ ಮಲ್ಯ, ವಿ.ಎಂ. ನಾಯ್ಕ, ಪ್ರಕಾಶ ಕುಂಜಿ, ಗಿರೀಶ ಶೆಟ್ಟಿ, ಡಿ.ಜಿ. ನಾಯ್ಕ ಮತ್ತು ಎನ್‌ಸಿಸಿ ಕೆಡೆಟ್‌ಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.