ಬೆಳೆ ನಷ್ಟ ಪರಿಹಾರ ಅವೆಜ್ಞಾನಿಕ: ಆರೋಪ
ಕಡೂರು, ಸೆ.30: ರಾಜ್ಯ ಸರಕಾರ ಕಡೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದರೂ, ಬೆಳೆ ನಷ್ಟದ ಪರಿಹಾರ ಮಾತ್ರ ಅವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ ಎಂದು ಸಿಂಗಟಗೆರೆ ಜಿಪಂ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್ ಆರೋಪಿಸಿದ್ದಾರೆ.
ತಾಲೂಕಿನಲ್ಲಿ ಈ ಬಾರಿ ಸಾವಿರಾರು ಎಕರೆಯಲ್ಲಿ ರೈತರ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ನೆಲಕಚ್ಚಿ ವೆ. ನಷ್ಟ ಹೊಂದಿದ ರೈತರ ಬೆಳೆಗಳಿಗೆ ಬಿಡುಗಡೆ ಮಾಡಲು ಉದ್ದೇಶಿಸಿರುವ ಬೆಳೆ ಪರಿಹಾರದ ಹಣ ಅವೈಜ್ಞಾನಿಕವಾಗಿದೆ. ಸರಕಾರವು ಜಿಲ್ಲಾಡಳಿತದ ಮೂಲಕ ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಗಳ ಮೂಲಕ ರೈತರ ಬೆಳೆ ನಷ್ಟದ ಅಂದಾಜು ಸಮೀಕ್ಷೆ ಮಾಡಿಸಿ ವರದಿ ತಯಾರಿಸಿದೆ. ಪ್ರತಿ ಹೆಕ್ಟೇರ್‌ಗೆ 6,500 ರೂ. ಪರಿಹಾರದ ಘೋಷಣೆಯಿಂದ ರೈತರಿಗೆ ಪ್ರಯೋಜನವಿಲ್ಲ ಎಂದು ಆರೋಪಿಸಿದರು.
ಸರಕಾರ ಕೈಗೊಳ್ಳುವ ತೀರ್ಮಾನಗಳು ರೈತರ ಪರವಾಗಿರಬೇಕು. ಈ ಹಿಂದೆ ತಾಲೂಕನ್ನು ಅತಿ ಹಿಂದುಳಿದ ತಾಲೂಕು ಎಂದು ಘೋಷಿಸಿದ್ದರೂ, ಬರಗಾಲದ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಗೊಳ್ಳಲಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಡಳಿತವು ಬೆಳೆ ನಷ್ಟದ ಪರಿಹಾರದ ಹಣ ಹೆಚ್ಚಿಸಿ, ಕುಡಿಯುವ ನೀರು, ಮೇವು ಖರೀದಿ ಸೇರಿದಂತೆ ಬರಗಾಲದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒಡೆಯರ್ ಆಗ್ರಹಿಸಿದ್ದಾರೆ.
ಅಭಿವೃದ್ಧಿ ಕೆಲಸಗಳು