ಕೆಪಿಎಲ್ : ಹುಬ್ಬಳ್ಳಿಗೆ 82 ರನ್‌ಗಳ ಜಯ

Update: 2016-09-30 17:48 GMT

ಹುಬ್ಬಳ್ಳಿ, ಸೆ.30: ಕೆಪಿಎಲ್ ಟ್ವೆಂಟಿ-20 ಟೂರ್ನಿಯ 28ನೆ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಇಂದು ಹುಬ್ಬಳ್ಳಿ ಟೈಗರ್ಸ್‌ ತಂಡ ರಾಕ್‌ಸ್ಟಾರ್ಸ್‌ ತಂಡವನ್ನು 85 ರನ್‌ಗಳ ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡ ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ.
ಕೆಎಸ್‌ಸಿಎ ರಾಜ್‌ನಗರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 185 ರನ್‌ಗಳ ಸವಾಲನ್ನು ಪಡೆದ ರಾಕ್‌ಸ್ಟಾರ್ಸ್‌ ತಂಡ 18 ಓವರ್‌ಗಳಲ್ಲಿ 99 ರನ್‌ಗಳಿಗೆ ಆಲೌಟಾಯಿತು.
ರಾಕ್‌ಸ್ಟಾರ್ಸ್‌ ತಂಡದ ಆರ್‌ಕೆ ರಾಹುಲ್ (37) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.ಆರಂಭಿಕ ದಾಂಡಿಗ ರಾಜೀವ್ 31 ರನ್, ಆರ್.ಗೌಡ ಔಟಾಗದೆ 16 ರನ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ರಾಕ್‌ಸ್ಟಾರ್ಸ್‌ ತಂಡ ಹುಬ್ಬಳ್ಳಿ ಟೈಗರ್ಸ್‌ನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಹುಬ್ಬಳ್ಳಿ ಟೈಗರ್ಸ್‌ 18 ಓವರ್‌ಗಳಲ್ಲಿ 7 ವಿಕೆಟ್‌ಗೆ 184ರನ್ ಗಳಿಸಿತ್ತು.
ಹುಬ್ಬಳ್ಳಿ ಆರಂಭಿಕ ದಾಂಡಿಗ ಮುಹಮ್ಮದ್ ತಾಹ 59 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕ್ರಾಂತಿಕುಮಾರ್ ಔಟಾಗದೆ 33 ರನ್, ಕೆಆರ್ ಕಪೂರ್ 27ರನ್, ಡಿ.ನೇಗಿ 25 ರನ್, ವಿಲಿಯಂ 15 ರನ್ ಗಳಿಸಿದರು.
,,,,,,,,,,,,

ಇಂದಿನ ಪಂದ್ಯ ಸೆಮಿಫೈನಲ್
ಹುಬ್ಬಳ್ಳಿ ಟೈಗರ್ಸ್‌-ಬೆಳಗಾವಿ ಪ್ಯಾಂಥರ್ಸ್‌
ಸಮಯ: ಮಧ್ಯಾಹ್ನ 1:30ಕ್ಕೆ
,,,,
ಮೈಸೂರು ವಾರಿಯರ್ಸ್‌-ಬಳ್ಳಾರಿ  ಟಸ್ಕರ‍್ಸ್‌ 
ಸಮಯ: ಸಂಜೆ 5:30ಕ್ಕೆ
ಸ್ಥಳ: ಕೆಎಸ್‌ಸಿಎ ರಾಜ್‌ನಗರ ಕ್ರೀಡಾಂಗಣ


ಸಮಯ: ಸಂಜೆ 5:30ಕ್ಕೆ
ಸ್ಥಳ: ಕೆಎಸ್‌ಸಿಎ ರಾಜ್‌ನಗರ ಕ್ರೀಡಾಂಗಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News