×
Ad

ಚಲೋ ಉಡುಪಿ ಹೋರಾಟಕ್ಕೆ ಮೊದಲ ಜಯ

Update: 2016-10-01 11:03 IST

ಕುಣಿಗಲ್ ತಾಲೂಕು ಹುಲಿಯೂರು ದುರ್ಗಾ ಹೋಬಳಿ ಕೆಂಚನಹಳ್ಳಿಯಲ್ಲಿರುವ ದಲಿತರ ಮೇಲಿನ ದೌರ್ಜನ್ಯ ಹಾಗೂ ದಲಿತರ ಭೂಮಿ ಕಬಳಿಕೆ ವಿಚಾರವಾಗಿ ಎಸ್ಸೈ ಮತ್ತು ಸಿಐ ಮೇಲೆ ಚಲೋ ಉಡುಪಿ ಬಳಗ ಒತ್ತಡ ಹೇರಿದ ಫಲವಾಗಿ ಆರೋಪಿ ಶಂಕರಯ್ಯನನ್ನು ಪೊಲೀಸ್ ಠಾಣೆಗೆ ಕರೆಸಿ ದಲಿತರ ಜಮೀನಿನಲ್ಲಿ ಸುರಿದಿದ್ದ ಸುಮಾರು 30 ಲೋಡ್‌ನಷ್ಟು ಜಲ್ಲಿಕಲ್ಲು, ದಿಮ್ಮಿಗಳನ್ನು ತೆರವುಗೊಳಿಸಿದ್ದಾರೆ.

ಜೊತೆಗೆ ದಲಿತರ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಕಂಪೌಡನ್ನು ಸರ್ವೇಯ ನಂತರ ತೆರವುಗೊಳಿಸುವಂತೆ ಶಂಕರಯ್ಯನಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಇದು ಚಲೋ ಉಡುಪಿ ಚಳುವಳಿಗೆ ಸಂದ ಮೊದಲ ಜಯವಾಗಿದೆ.

ಮುಂದೆ ಶಂಕರಯ್ಯ ಈಗಾಗಲೇ ಅಮಾಯಕ ದಲಿತರಿಂದ ಬರೆಸಿಕೊಂಡಿರುವ ಜಮೀನನ್ನು ಹಿಂಪಡೆಯಲು ಹೋರಾಟ ಆರಂಭಿಸಬೇಕಿದೆ. ಈ ಪ್ರಕರಣವನ್ನು ದಾಖಲಿಸಲು ಪೊಲೀಸರಿಗೆ ಒತ್ತಡ ಹೇರಲು ಸಹಕರಿಸಿದ ಪಿ.ಜೆ.ಗೋವಿಂದರಾಜು ಪಟ್ಲು, ದಲಿತ ನಾರಾಯಣ ಕುಣಿಗಲ್, ಹರ್ಷಕುಮಾರ್ ಕುಗ್ವೆ, ಸಚ್ಚಿದಾನಂದ, ಚೆಲುವರಾಜ್, ಹುಲಿಕುಂಟೆ ಮೂರ್ತಿ, ಮತ್ತಿತರರ ಸಹಕಾರ ಸದಾ ಸ್ಮರಣೀಯ.

ವರದಿ: ನಾಗೇಶ್. ಕೆ.ಎನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor