ಸಹಾ ಅರ್ಧಶತಕ ; ಭಾರತ 316ಕ್ಕೆ ಆಲೌಟ್
Update: 2016-10-01 11:27 IST
ಕೋಲ್ಕತಾ, ಅ.01: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಆರಂಭಗೊಂಡ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ದಾಖಲಿಸಿದ್ದು, 104.5 ಓವರ‍್ ಗಳಲ್ಲಿ 316 ರನ್‌ಗಳಿಗೆ ಆಲೌಟಾಗಿದೆ.
ನ್ಯೂಝಿಲೆಂಡ್‌ನ ದಾಳಿಗೆ ಸಿಲುಕಿದ ಭಾರತ ನಿನ್ನೆ ಮೊದಲದಿನದಾಟದಂತ್ಯಕ್ಕೆ 86 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 239 ರನ್ ಗಳಿಸಿತ್ತು.
14 ರನ್ ಗಳಿಸಿರುವ ವೃದ್ಧಿಮಾನ್ ಸಹಾ ಮತ್ತು ಇನ್ನೂ ಖಾತೆ ತೆರೆಯದ ರವೀಂದ್ರ ಜಡೇಜ ಔಟಾಗದೆ ಕ್ರೀಸ್‌ನಲ್ಲಿದ್ದರು. ಇಂದು ಎರಡನೆ ದಿನದಾಟ ಮುಂದುವರಿಸಿದ ಅವರು ಎಂಟನೆ ವಿಕೆಟ್‌ಗೆ 41 ರನ್ ಸೇರಿಸಿದರು. ಸಹಾ 54 ರನ್ ಗಳಿಸಿ ಅಜೇಯರಾಗಿ ಉಳಿದರು. ಜಡೇಜ 14ರನ್, ಭುನೇಶ್ವರ ಕುಮಾರ್ 5 ರನ್ ಮತ್ತು ಮುಹಮ್ಮದ್ ಶಮಿ 14ರನ್ ಗಳಿಸಿ ಔಟಾದರು.