×
Ad

ಚಲೋ ಉಡುಪಿಯ ಬಗ್ಗೆ ನನ್ನ ಅನಿಸಿಕೆ

Update: 2016-10-02 12:12 IST

ಸ್ವಾತಂತ್ರ್ಯ ಪೂರ್ವದಲ್ಲೂ ಕೋಮುಭಾವನೆ ಕೆರಳುವುದರ ಮೂಲಕವೇ ಸಿಪಾಯಿ ದಂಗೆ ನಡೆಯಿತು ಎಂಬುದು ಇತಿಹಾಸದಲ್ಲಿ ಕಂಡು ಬರುವ ವಿಚಾರ ಧರ್ಮ ಧರ್ಮಗಳ ನಡುವೆ ಆಗಲೇ ಅಂತರವಿತ್ತು ಎಂಬುದನ್ನು ನಾವು ಗಮನಿಸಬಹುದು.

ಸ್ವಾತಂತ್ರ್ಯನಂತರ ಪಾಕಿಸ್ತಾನವನ್ನುವಿಭಜಿಸಿದ ಇಂದಿರಾ ನಡೆಯಿಂದ ರೋಸಿದ ಪಾಕಿಸ್ತಾನ ಭಾರತಕ್ಕೆ ಉಗ್ರವಾದವನ್ನು ರಫ್ತು ಮಾಡಲು ಆರಂಭಿಸಿತು. ಇದರಿಂದಾಗಿ ಭಾರತದಲ್ಲಿ ಉಗ್ರವಾದ ಬೆಳೆಯಲು ಆರಂಭವಾಯಿತು.

ನಂತರ ತೊಂಬತ್ತರ  ದಶಕದಲ್ಲಿ ರಾಮ ಮಂದಿರದ ನೆಪದಿಂದ ಬಾಬ್ರೀ ಮಸೀದಿ ದ್ವಂಸ ದೇಶಾದ್ಯಂತ ಕೋಮುವಾದಕ್ಕೆ ಪ್ರೇರೇಪಣೆಯಾಯಿತು. ನಂತರ ನಡೆದ ರಥಯಾತ್ರೆ ಸಮಸ್ತ ಹಿಂದೂ ಭಾಂದವರ ಭಾವನೆ ಕೆರಳಿಸಿ ಕೋಮುವಾದದ ಅಟ್ಟಹಾಸವೇ ನಡೆಯಿತು. ಅನಂತರ ದೇಶದಲ್ಲಿ ನಡೆದ ಹಲವಾರು ಕೋಮುಗಲಭೆಯಿಂದ ಪ್ರಾಣ ಕಳೆದುಕೊಂಡವರು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಜನತೆ ಎಂದರೆ ಖಂಡಿತಾ ಉತ್ಪ್ರೇಕ್ಷೆ ಎನಿಸದು.
ಒಂದು ಕಡೆಯಿಂದ ಕೋಮುಗಲಭೆಗಳು ನಡೆಯುತ್ತಾ ಬಂದರೆ ಮತ್ತೊಂದು ಕಡೆಯಿಂದ ಹಿಂದೂ ಧರ್ಮದೊಳಗಿನ ಜಾತೀವಾದಕ್ಕೆ ಕೋಮುವಾದವನ್ನು ಗೋಡೆಯಂತೆ ಬಳಸಿಕೊಂಡು ದಲಿತ ಮತ್ತು ಹಿಂದುಳಿದ ಯುವಕರ ತಲೆಗೆ ಧರ್ಮದ ಅಪೀಮನ್ನು ತುಂಬಿಸಿ ಜಾತೀವಾದ ಗಮನಕ್ಕೆ ಬರದಂತೆ ಇರಲು ಯಶಸ್ವಿಯಾಯಿತು.

ಈ ನಡುವೆ ಸರಕಾರಿ ಶಾಲೆ ಮತ್ತು ಕ್ರೈಸ್ತ ಮಿಷನರಿಗಳು ನಡೆಸಲ್ಪಡುವ ಶಾಲೆಗಳಿಂದ ವಿದ್ಯಾವಂತರಾದ ದಲಿತ ಯುವಕರು ದಲಿತ ಚಳುವಳಿಯನ್ನು ಆರಂಭಿಸಿ ಮೇಲ್ವರ್ಗದ ಬಂಡವಾಳವನ್ನು ನಿಧಾನವಾಗಿ ಬಯಲುಮಾಡಲು ಆರಂಭಿಸಿತು. ಅವಿದ್ಯಾವಂತ ದಲಿತರು ಮೇಲ್ವರ್ಗದವರಿಂದ ನಡೆಯುತ್ತಿದ್ದ ದೌರ್ಜನ್ಯಕ್ಕೆ ಯಾವುದೇ ಪ್ರತಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ, ದಲಿತ ಚಳುವಳಿಗಳ ಮೂಲಕ ದಲಿತರು ದೌರ್ಜನ್ಯವನ್ನು ಖಂಡಿಸಲು ಆರಂಭಿಸಿದಾಗ ಎಚ್ಚೆತ್ತ ಮೇಲ್ವರ್ಗ ದಲಿತರಿಗೆ ಧರ್ಮದ ಅಫೀಮು ಕುಡಿಸಲು ಆರಂಭಿಸಿತು. ಇದರಿಂದ ಈಗಲೂ ಕೆಲ ಯುವಕರು ಶೇಂದಿ ಕುಡಿದ ಮಂಗನ ಹಾಗೆ ವರ್ತಿಸುತ್ತಿದ್ದಾರೆ.ಈ ಎಲ್ಲಾ ಕಾರಣಗಳಿಂದಾಗಿ ಯುವಕರ ತಲೆಗೆ ತುಂಬಿದ ಕೋಮು ದ್ವೇಶವನ್ನು ಹೋಗಲಾಡಿಸಿ ಮೇಲ್ವರ್ಗದ ಕುತಂತ್ರವನ್ನು ಬಯಲಿಗೆ ತಂದು ನಮ್ಮ ಯುವಕರ ರಕ್ಷಣೆಗಾಗಿ ಇಂತಹ ಯಶಸ್ವಿ ಕಾರ್ಯಕ್ರಮಗಳ ಬಹಳ ಅಗತ್ಯವಿದೆ. ಇಡೀ ಕಾರ್ಯಕ್ರಮದ ಮೂಲ ಸಂಘಟಕರಿಗೆ ಈ ಮೂಲಕ ತುಂಬು ಹೃದಯದ ವಂದನೆಗಳನ್ನು ತಿಳಿಸುತ್ತ ನಮ್ಮ 'ಚಲೋ ಉಡುಪಿಗೆ' ಆತ್ಮೀಯ ಸ್ವಾಗತ ಬಯಸುತ್ತೇನೆ.

-ಸೂರ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor