ಚಲೋ ಉಡುಪಿ ಬೆಂಬಲಿಸಿ: ಪ್ರಭಾ ಬೆಳಮಂಗಲ
ದಲಿತರು ಶತಶತಮಾನಗಳಿಂದ ತುಳಿತಕ್ಕೆ ಒಳಗಾದ ಜನಾಂಗ. ಇವತ್ತಿಗೂ ಅವರ ಮೇಲಾಗುವ ದಬ್ಬಾಳಿಕೆ, ದೌರ್ಜನ್ಯ, ಹಿಂಸಾಚಾರ ತಪ್ಪಿದ್ದಲ್ಲ. ಅಲ್ಲಲ್ಲೆ ಘಟನೆಗಳು ನಡೆದಾಗ ಸಣ್ಣ ಪುಟ್ಟ ಪ್ರಮಾಣದಲ್ಲಿ ಹೋರಾಟ ನಡೆಯುತ್ತವೆ. ಅವು ಸಂಧಾನಗಳು ನಡೆದು ಅಲ್ಲೆ ಮುಚ್ಚು ಹೋಗ್ತವೆ. ಇವತ್ತಿಗೂ ದಲಿತರಿಗೆ ಭೂಮಿ ಪ್ರಶ್ನೆ ಬಾಕಿ ಇದೆ. ಭೂಮಿ ಇಲ್ದೇ ಇರೋ ಕಾರಣಕ್ಕೆ ಅವರ ಮೇಲೆ ಹೆಚ್ಚಿನ ದಬ್ಬಾಳಿಕೆ ನಡೆಯುತ್ತಲೇ ಇದೆ. ಅವರು ಭೂ ಮಾಲಕರ ಮೇಲೆ ಅವಲಂಬಿತರಾಗಿದ್ದಾರೆ. ಹಾಗಾಗಿ ಅವರು ದಬ್ಬಾಳಿಕೆಗೆ ಒಳಗಾಗುವುದು ಅನಿವಾರ್ಯವಾಗಿರುತ್ತದೆ. ಹಾಗಾಗಿ ಅವರು ದಬ್ಬಾಳಿಕೆಗೆ ಎತ್ತಿರುವ ಪ್ರಶ್ನೆಬಹಳ ಅಮೂಲ್ಯವಾದುದು. ಅವರಿಗೆ ಭೂಮಿ ಕೊಡ್ಬೇಕು ಜೊತೆಗೆ ಅಸ್ಪಶ್ಯತೆ ತೊಲಗ್ಬೇಕು.
ಈಗ್ಲೂ ಅಸ್ಪಶ್ಯತೆನಾ ಒಳಗೊಳಗೆ ಜೋಪಾನ ಮಾಡುವ ಶಕ್ತಿಗಳೂ ಇದಾವೆ. ಅಂತಹ ಶಕ್ತಿಗಳು ಮೇಲ್ನೋಟಕ್ಕೆ ನಾವು ಸಂವಿಧಾನದ ಪ್ರಕಾರ ಹೋಗ್ತಾ ಇದೀವಿ ಅದನ್ನ ನಾವು ಎಲ್ಲೂ ಆಚರಿಸ್ತಾಇಲ್ಲ ಅಂತ ಹೇಳಿಕೆಗಳು ಕೊಡ್ತಾರೆ ದಲಿತರ ಮೇಲೆ ದೌರ್ಜನ್ಯ ಎಲ್ಲೂ ನಡಿತಾ ಇಲ್ಲ ಅಂತ ಹೇಳ್ತಾ ಇರ್ತಾರೆ. ಆದ್ರೆ ಮೇಲ್ವರ್ಗದವರು ಒಳಗೊಳಗೇ ಪೋಷಣೆ ಮಾಡ್ತಾರೆ. ಆಹಾರದ ಹಕ್ಕಿನ ಮೇಲೆ ದಾಳಿ ನಡಿತಾ ಇದೆ. ದೇಶದಲ್ಲಿ ಆರ್ಥಿಕವಾಗಿ ತುಂಬಾ ಹಿಂದುಳಿದಿರುವ ಸಮುದಾಯಗಳು ಅಂದ್ರೆ ಅದು ದಲಿತವರ್ಗ ಮತ್ತು ಅಲ್ಪಸಂಖ್ಯಾತರು. ಅವರ ಆಹಾರದ ಮೇಲೂ ದಾಳಿ ನಡಿತಾ ಇದೆ. ದನದ ಮಾಂಸ ತಿನ್ನಬಾರ್ದು. ದನಗಳನ್ನ ಸಾಗಿಸಬಾರದು, ಅನ್ನೋದೆಲ್ಲ ಅವರ ಆಹಾರದ ಮೇಲೆ ನೇರ ದಬ್ಬಾಳಿಕೆ ಮಾಡಿದಂತಾಗುತ್ತದೆ. ಅವರು ಕೇಳುವ ಬೇಡಿಕೆ ಸರಿ ಇದೆ. ನಾವು ಅವರಿಗೆ ಬೆಂಬಲ ನೀಡ್ತೀವಿ. ಅವರ ಹೋರಾಟದ ಒಂದು ಭಾಗವಾಗಿ ನಾವಿರ್ತೀವಿ.
ಯಾವತ್ತೋ ಈಡೇರಬೇಕಾದ ಬೇಡಿಕೆಗಳಿವು ಸ್ವತಂತ್ರ ಬಂದು 70 ವರ್ಷಗಳಾದ್ರು ನಾವು ಈ ಸಮಸ್ಯೆಗಳನ್ನ ಹೋರಾಟದ ಮೂಲಕ ಬಗೆಹರಿಸಿಕೊಳ್ಳ ಬೇಕಾದ ಪರಿಸ್ಥಿತಿ ಇದೆ.ನಾವು ಈ ಬೇಡಿಕೆಗಳನ್ನು ಸರ್ಕಾರಕ್ಕೆ ನೇರವಾಗಿ ಮುಂದಿಡ್ತಿದ್ದೇವೆ. ಈ ಹೋರಾಟದ ಮೂಲಕ ಸಕಾರ ಕಣ್ತೆರೆದು ನಮ್ಮ ಹೋರಾಟದ ಬೇಡಿಕೆಗಳಿಗೆ ಸ್ಪಂದಿಸಬೇಕು. ದೇವಸ್ಥಾನಕ್ಕೆ ಒಂದು ದಲಿತ ಹುಡ್ಗ ಹೋದ್ರೆ ಅವನ್ನ ಕಂಬಕ್ಕೆ ಕಟ್ಟಾಕಿ ಹೊಡೀತಾರೆ. ಅದೇನಾದ್ರು ದೂರು ದಾಖಲಾದ್ರೆ ಅಲ್ಲಲ್ಲೆ ಸಂದಾನ ಮಾಡಿ 100-200 ರೂ ಹಣ ಕೊಟ್ಟು ಕಳಿಸ್ತಾರೆ. ಇಂತಹ ಆಚರಣೆಗಳಿಗೆ ಒಳಗೊಳಗೆ ಪ್ರೋತ್ಸಾಹ ಕೊಡ್ತಾರೆ ಅವ್ರಿಗೂ ಈ ಸಂದೇಶ ಹೋಗ್ಬೇಕು.ಸರ್ಕಾರ ಕಣ್ತೆರೆದು ಈ ಸಮಸ್ಯೆಗಳನ್ನ ಬಗೆಹರಿಸೋಕೆಒಂದು ನಿರ್ಧಾರಕ್ಕೆ ಬರ್ಬೇಕು.
ಈ ಕುರಿತು ಸಾಕೇತ್ ಪತ್ರಿಕೇಲಿ ಒಂದು ಲೇಖನ ಬಂದಿತ್ತು ಅದನ್ನು ಬಿಟ್ರೆ, 'varthabharti.in'ನಲ್ಲಿ ನೀವೇ ನಮ್ಮ ಹೋರಾಟಕ್ಕೆ ಪ್ರೋತ್ಸಾಹ ಕೊಡತಿರೋದು ಒಂದು ಹೆಮ್ಮೆಯ ಸಂಗತಿ. ನನ್ನ ಅನಿಸಿಕೆಯಂತೆ ಯಾವುದೇ ಮಾಧ್ಯಮಗಳು ಚಲೋ ಉಡುಪಿ ಕುರಿತು ಗಮನ ಹರಿಸುತ್ತಿಲ್ಲ. ಎಲ್ಲ ದೃಶ್ಯ ಮಾಧ್ಯಮಗಳು ಜನಿವಾರ ಹಾಕಿಕೊಂಡ್ಬಿಟ್ಟಿದ್ದಾರೆ.
ಅಲ್ಪಸಂಖ್ಯಾತರು, ದಲಿತರೆಲ್ಲರೂ ಶೋಷಣೆಗೆ ಒಳಪಡುತ್ತಲೇ ಬಂದಿದ್ದಾರೆ. ಅವರ ಬದಲಾವಣೆಗೆ ಹೋರಾಟ ಬಿಟ್ರೆ ಬೇರೆ ಮಾರ್ಗ ಇಲ್ಲ. ಒಂದು ಖುಷಿ ವಿಚಾರ ಅಂದ್ರೆ ಹೆಚ್ಚಿನ ಯುವ ಜನತೆ ಪ್ರೋತ್ಸಾಹ ನೀಡ್ತಿರೋದು. ಒಂದು ಭಿನ್ನವಾದ ಪತ್ರಿಕೆ ಇದೆ ಅಂದ್ರೆ ಅದು ವಾರ್ತಾಭಾರತಿ.
ಅಭಿಪ್ರಾಯ ಸಂಗ್ರಹ: ರಮ್ಯ ಎಸ್.