×
Ad

ಭಾವಲಹರಿ......ಬಾಲಕೃಷ್ಣ ಶಿಬಾರ್ಲ

Update: 2016-10-02 17:35 IST

ಹೊಸ ಗಾಳಿ

ಬೀಸುತ್ತಿರುವ ಗಾಳಿ ತಂಗಾಳಿಯಲ್ಲ
ಸಮಾನತೆಯ ಸಮರ ಸಾರುವ ಬಿರುಗಾಳಿ
ಸಾತ್ವಿಕ ರಾಜಸ ತಾಮಸ ಭೇದ ಗುಣ
ಆಹಾರದೊಳಗಿಲ್ಲ ಮನದೊಳಗಿದೆ
ಎಂದು ತೋರಿಸುವ ಸುಂಟರಗಾಳಿ

ನನ್ನಾಹಾರದ ಮೇಲೆ ನಿನ್ನಧಿಕಾರಿ
ನಿನ್ನಾಹಾರದ ಮೇಲೆ ನನ್ನಾಯ್ಕೆ ನಿರಾಕರಿಸಲು
ಸೊಪ್ಪು, ದನ, ತರಕಾರಿ, ಹಂದಿ
ಹಣ್ಣು,ಕಾಯಿ ಕುರಿ ಕೋಳಿ
ನಿನ್ನಾಯ್ಕೆ ನಿನ್ನದು ನನ್ನಾಯ್ಕೆ ನನ್ನದು
ಎಂದು ಸಾರಲು ಬೀಸುತಿದೆ ಹೊಸ ಗಾಳಿ

ಇರುವುದೊಂದೇ ಭೂಮಿ
ಹುಟ್ಟಿ ಬದುಕಿ ಸಾಯಲು
ಮತ್ಯಾಕೆ ಬಂತೋ ಬುದ್ಧಿ
ಜಾತಿ,ಮತ, ಲಿಂಗ ಬೇಧ ಮಾಡಲು

ಎಲ್ಲಾ ಕೆಡುಕಿಗೆ ಉತ್ತರ ನೀಡಿ
ಸಮಾನತೆಯ ಸಹಬಾಳ್ವೆ  ಪೋಷಿಸಲು
ಕೊಳಕು ಮನಸುಗಳ ಕೊಳಚೆಗೆ ಸರಿಸಿ
ಬನ್ನಿರಿ.. ಸೇರಿರಿ ಹೊಸ ಕ್ರಾಂತಿಯ ಸಾಗರದೊಳು

ಬಾಲಕೃಷ್ಣ ಶಿಬಾರ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor