×
Ad

ಚಲೋ ಉಡುಪಿ: ಸ್ವಾಭಿಮಾನದ ನಡೆ

Update: 2016-10-02 18:27 IST

ಸ್ವಾಭಿಮಾನದ ನಡೆ

ಉಡುಪಿ ಚರಿತ್ರೆ ಬರೆಯಲಿ
ಇದರ ನೆನಪು ಹೆಜ್ಜೆ ಹಜ್ಜೆಗೂ ಬರಲಿ
ಚಲೋ ಚಲೋ ಉಡುಪಿ

ಹೆದ್ದಾರಿಯೊಳಗೆ ಎಲ್ಲವ ನುಗ್ಗಿ ನಡೆಯಲಿ
ಬೆಂಕಿಯ ಬೇಧಿಸಿ ಹೊರಡಲಿ
ಚಲೋ ಚಲೋ ಉಡುಪಿ

ಪರಂಪರೆಯ ದಾಳಿಯ ಧ್ವಂಸವ ಮಾಡುತ
ಮಿಂಚಿನ ವೇಗದಲಿ ಹೊರಡಲಿ
ಚಲೋ ಚಲೋ ಉಡುಪಿ

ಧರ್ಮವ ಕಿತ್ತು ಗಡಿಯ ಮೆಟ್ಟಿ
 ಎಲ್ಲರೂ ಒಂದೇ ಪಥದಲಿ ಸಾಗಲಿ
ಚಲೋ ಚಲೋ ಉಡುಪಿ

ಭೋರ್ಗರೆವ ಜಲಪಾತದಂತೆ
ಹದ್ದಿನ ಕಣ್ಣೋಟದಂತೆ
ಚಲೋ ಚಲೋ ಉಡುಪಿ

ದಮನಿತರ ಶಕ್ತಿ ಧರೆಯೊಳಗೆ ಬೆಳಗಲಿ
ದೊರೆಯೊಳಗೆ ನಡುಕ ಹುಟ್ಟಲಿ
ಚಲೋ ಚಲೋ ಉಡುಪಿ

ಬಿತ್ತಬೇಕಿದೆ ತಿನ್ನಬೇಕಿದೆ
ಬಯಸಿ ಅರಸೀ ಅರಸೀ
ಚಲೋ ಚಲೋ ಉಡುಪಿ

ದಲಿತ ಸೂರ್ಯನ ರಶ್ಮಿ
ಮನೆ ಮನೆ ಬೆಳಗಲಿ ಮನವ ತಟ್ಟಲಿ
ಚಲೋ ಚಲೋ ಉಡುಪಿ

ಸ್ವಾಭಿಮಾನದ ಪಂಜು ಹಿಡಿಯುತ
ಸಾಲು ಸಾಲು ಸಾಗಿಬರಲಿ
ಚಲೋ ಚಲೋ ಉಡುಪಿ

ಮನುವಿನ ಮದ್ದುಕಿತ್ತೊಗೆಯೋಣ
ಮುಗಿಲ ಅಗಲಕ್ಕೆ ಕೀರ್ತಿಯ ಪಸರಿಸೋಣ
ಚಲೋ ಚಲೋ ಉಡುಪಿ

ಮೂಲಭೂತವಾದಿಗಳ
ಮೂಲೆಗೆತಳ್ಳುತ್ತ ಮುನ್ನಡೆ

            
ಮಲ್ಲಿಕಾರ್ಜುನ ಕೋರವರ್

ಪತ್ರಿಕೋದ್ಯಮ ವಿದ್ಯಾರ್ಥಿ

ಬದುಕು ಕಮ್ಯೂನಿಟಿ ಕಾಲೇಜು, ಬೆಂಗಳೂರು.

ಮೊ: 9986809272

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor