×
Ad

ಶಿವಮೊಗ್ಗ: ಮುಂದುವರಿದ ಅಬಕಾರಿ ಪೊಲೀಸರ ದಾಳಿ

Update: 2016-10-04 22:44 IST

  ಶಿವಮೊಗ್ಗ, ಅ.4: ಮೆಕ್ಕೆ ಜೋಳದ ಹೊಲದಲ್ಲಿ ಬೆಳೆಯಲಾಗಿದ್ದ ಸುಮಾರು 5 ಲಕ್ಷ ರೂ. ವೌಲ್ಯದ ಗಾಂಜಾ ಸಸಿಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕುಂಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಆರೋಪಿಗಳನ್ನು ಟೀಕ್ಯಾನಾಯ್ಕಾ ಮತ್ತು ಧರ್ಮನಾಯ್ಕಾ ಎಂದು ಗುರುತಿಸಲಾಗಿದೆ.

ಅವರು ತಮ್ಮ ಹೊಲದಲ್ಲಿ ಮೆಕ್ಕೆಜೋಳ ಗಿಡದ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿದ್ದರು ಎನ್ನಲಾಗಿದೆ. ಈ ಕುರಿತಂತೆ ಖಚಿತ ವರ್ತಮಾನ ಸಂಗ್ರಹಿಸಿದ್ದ ಅಬಕಾರಿ ಪೊಲೀಸರು ಮಂಗಳವಾರ ಮುಂಜಾನೆ ದಿಢೀರ್ ದಾಳಿ ನಡೆಸಿ, ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 510 ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದು, ಇದರ ವೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದಾಳಿಯ ಮಾಹಿತಿ ತಿಳಿದ ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ದಾಳಿಯಲ್ಲಿ ಅಬಕಾರಿ ಪೊಲೀಸ್ ಡಿವೈಎಸ್ಪಿ ನಾಗೇಶ್ ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಮೈಲಾನಾಯ್ಕೆ, ಶೀಲಾ, ಸುಜಾತಾ, ಸಿಬ್ಬಂದಿ ಲೋಕೇಶಪ್ಪ, ಹಾಲಾನಾಯ್ಕ್ಕೆ, ದಿವ್ಯಾ, ಸಿದ್ದಪ್ಪಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News