×
Ad

ತೆಂಗಿನ ಮರ ಏರಿದ ಬಾಲಕನಿಗೆ 'ವಿಚಿತ್ರ' ಚಿತ್ರಹಿಂಸೆ !

Update: 2016-10-05 13:02 IST

ಹಾಸನ,ಅ.5:   ಕಾಯಿ ಕದಿಯಲು ತೆಂಗಿನ ಮರ ಏರಿದ್ದ ಆರೋಪದಲ್ಲಿ 9 ವರ್ಷದ ಬಾಲಕನೊಬ್ಬನ  ಮೇಲೆ ಯುವಕರ ಗುಂಪೊಂದು ಜಾಲಿ ಮರದ ಮುಳ್ಳಿನ ಕೋಲಿನಿಂದ ಹೊಡೆದು ಅಮಾನವೀಯವಾಗಿ , 'ವಿಚಿತ್ರ ಶಿಕ್ಷೆ'  ನೀಡಿದ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.
 ಆರು ಮಂದಿಯ ತಂಡ  ಬಾಲಕ ನವಾಝ್‌ನ್ನು ಇರುವೆಗೂಡಿನ ಕಲ್ಲಿನ ಮೇಲೆ ನಿಲ್ಲಿಸಿ ಜಾಲಿ ಮರದ ಮುಳ್ಳಿನ ಕೋಲಿನಿಂದ ಹೊಡೆಯುತ್ತಾ ಖುಶಿಪಟ್ಟಿದೆ. ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದರೂ,ವಾಟ್ಸಾಪ್‌ ಹುಚ್ಚು ಆರೋಪಿಗಳನ್ನು ಇದೀಗ ಪೊಲೀಸರ ಕೈಗೆ ಸಿಕ್ಕಿ ಬೀಳುವಂತೆ ಮಾಡಿದೆ.
 ಮುಬಾರಕ್, ಶರ್ಪು, ಅರ್ಪನ್, ಸದ್ದಾಂ ಸೇರಿದಂತೆ ಆರು ಮಂದಿ ಬಾಲಕ ನವಾಝ್‌ಗೆ ವಿಕೃತವಾಗಿ ಥಳಿಸಿದ್ದಾರೆ. ಬಾಲಕ "ಅಣ್ಣ ನನ್ನನ್ನು ಬಿಟ್ಟು ಬಿಡು ಕಾಲಿಗೆ ಬೀಳುತ್ತೇನೆ ” ಎಂದು ಪದೇ ಪದೇ ಅಂಗಲಾಚಿದರೂ, ನವಾಝ್‌ಗೆ ಯುವಕರು  ಮುಳ್ಳಿನಿಂದ ಚುಚ್ಚಿ ಚುಚ್ಚಿ ಅಟ್ಟಹಾಸ ಮೆರೆದಿದ್ದಾರೆ. 
ಬಾಲಕಕನ್ನು ಇರುವೆಗೂಡಿನ ಮೇಲೆ ನಿಲ್ಲಿಸಿ ಆತನಿಗೆ ಚಿತ್ರ ಹಿಂಸೆ ನೀಡಿದ್ದು  ಮಾತ್ರವಲ್ಲದೆ ದೃಶ್ಯವನ್ನು   ಮೊಬೈಲ್​'ನಲ್ಲಿ ಚಿತ್ರೀಕರಿಸಿ ತಮ್ಮ ಸ್ನೇಹಿತರಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾರೆ.  ಬಾಲಕ ನವಾಝ್‌ ನಡೆದ ಘಟನೆಯನ್ನು ಮನೆಯಲ್ಲಿ ಹೇಳಿರಲಿಲ್ಲ. ಆದರೆ ಆತನಿಗೆ ಹೊಡೆಯುತ್ತಿದ್ದ ದೃಶ್ಯ ಇದು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದು ಬಾಲಕನ ಹೆತ್ತವರಿಗೂ ಗೊತ್ತಾಗಿದೆ.. ಅವರು ಈ ಬಗ್ಗೆ ಅರಸೀಕೆರೆ ನಗರ ಠಾಣೆಗೆ ದೂರು ನೀಡಿದ್ದಾರೆ. ಬಾಲಕನ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳಿಗಾಗಿ ಪೊಲೀಸರು  ಶೋಧ ನಡೆಸುತ್ತಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News