×
Ad

ಚಲೋ ಉಡುಪಿ; ಜನ ಚರಿತ್ರೆ ಕಟ್ಟುವ ಅಮೂಲ್ಯ ಪ್ರಯಾಸ: ಕಿರಣ್ ಎಂ. ಗಾಜನೂರು

Update: 2016-10-05 16:41 IST

ಜಗತ್ತಿನ ಇತಿಹಾಸ, "ಒಬ್ಬ ಮನುಷ್ಯ ಹಸಿವಿನಿಂದ ಮಾತ್ರ ದುರಂತಕ್ಕೆ ಈಡಾಗುವುದಿಲ್ಲ, ತುಂಬು ಸಮಾಜದಲ್ಲಿ ಮನುಷ್ಯನೊಬ್ಬನಿಗೆ ಆತ ಮನುಷ್ಯನಾದ ಕಾರಣಕ್ಕೆ ಧಕ್ಕಲೇಬೇಕಾದ ಮೂಲಭೂತ ಅಗತ್ಯಗಳ ಅಲಭ್ಯತೆ ಸೃಷ್ಟಿಸುವ ಅಪಮಾನದ ಕಾರಣಕ್ಕೆ ಆತ ದುರಂತಕ್ಕೆ ಈಡಾಗುತ್ತಾನೆ" ಎಂಬುದನ್ನು ಸಾರಿ ಸಾರಿ ತೋರಿಸಿದೆ.

ಇಂದು ನಮ್ಮ ನಡುವಿನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತ, ಸತ್ತ ಜಾನುವಾರಿನ ಚರ್ಮ ಸುಲಿದ ಕಾರಣಕ್ಕೆ ಹಲ್ಲೆಗೊಳಗಾದ ದಲಿತ, ಅಲ್ಪಸಂಖ್ಯಾತ, ಆಧುನಿಕ ಅಭಿವೃದ್ದಿಯ ಹೊಡೆತಕ್ಕೆ ಭೂಮಿ ಕಳೆದುಕೊಂಡು ನಿಂತಿರುವ ಆದಿವಾಸಿ, ಮಲದ ಗುಂಡಿಯಲ್ಲಿ ಕುತ್ತಿಗೆ ಮಟ್ಟ ಮುಳುಗಿರುವ ಪೌರ ಕಾರ್ಮಿಕ, ಹೀಗೆ ಮನುಷ್ಯ ಹಕ್ಕುಗಳನ್ನು ಕಳೆದುಕೊಂಡು ನಿಂತಿರುವ ಮತ್ತು ಆ ಕಾರಣಕ್ಕೆ ಅವಮಾನವನ್ನು ಹೊತ್ತಿರುವ ಚಿತ್ರಗಳು ಮನುಷ್ಯನ ಕೇಂದ್ರ ಸಮಸ್ಯೆ ಹಸಿವಷ್ಟೆ ಅಲ್ಲ! ಸಮಾಜ ರೂಪಿಸಿರುವ ಅಪಮಾನವೂ ಹೌದು! ಎಂಬುದನ್ನು ನಮ್ಮ ಪೀಳಿಗೆಗೆ  ಮನದಟ್ಟು ಮಾಡಬೇಕಿದೆ. 

ಆ ಕಾರಣಕ್ಕೆ "ಚಲೋ ಉಡುಪಿ" ಯಾರ ವಿರುದ್ಧದ ಚಳುವಳಿಯೂ ಅಲ್ಲ! ಬದಲಾಗಿ ಮನುಷ್ಯ ಬದುಕನ್ನು ಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಿಕ್ಕಿಸಿ  ಅಸಮಾನತೆಯನ್ನು ಸೃಷ್ಟಿಸಿ ಪೋಷಿಸುತ್ತಿರುವ ದೇಶದಲ್ಲಿ ಸಹಜ ಮನುಷ್ಯ ಪ್ರಜ್ಞೆಯನ್ನು, ಸಾಮಾಜಿಕ ಪ್ರಜ್ಞೆಯಾಗಿಸಲು ನಡೆಸುತ್ತಿರುವ ಹೋರಾಟ, ಆ ಕಾರಣಕ್ಕೆ ವರ್ತಮಾನದ ಘೋರ ಬಿಕ್ಕಟ್ಟುಗಳನ್ನು ಕಣ್ಣೆದುರು ತಂದು ನಿಲ್ಲಿಸುವ “ಚಲೋ ಉಡುಪಿ” ಜನಚರಿತ್ರೆ ಕಟ್ಟುವ ಒಂದು ಅಮೂಲ್ಯ ಪ್ರಯಾಸ ಅನ್ನಿಸುತ್ತಿದೆ ಆ ಕಾರಣಕ್ಕೆ ಪ್ರಜ್ಞಾವಂತರು ಅದನ್ನು ಬೆಂಬಲಿಸಬೇಕಿದೆ ಆ ಹೋರಾಟದ ಜೊತೆ ನಾಲ್ಕು ಹೆಜ್ಜೆ ಹಾಕಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor