ಚಲೋ ಉಡುಪಿ: ಭಾವ ಲಹರಿಯಲ್ಲಿ ಮಂಜುಳಾ ಹುಲಿಕುಂಟೆ
Update: 2016-10-05 18:44 IST
ಸಿಡಿವ ಬಂಡೆಗಳಲ್ಲ ನಾವು
ಸಿಡಿವ ಬಂಡೆಗಳಲ್ಲ ನಾವು
ಕೊರೆವ ತಣ್ಣೀರು
ನೀಲಿ ಬಾನ ಕೆಂಪುಸೂರ್ಯನ ಎಂದೂ ನಂಬೋರು...
ಬುದ್ಧನಿದ್ದಾನೆ ಎದೆಯ ಸದ್ದಲಿ
ಅಕ್ಕ, ಅಲ್ಲಮ್ಮ, ಅಂಬೇಡಿಗರೇ ಹಾದಿ ನಮಗಿಲ್ಲಿ
ಸಿಡಿವ ಬಂಡೆಗಳಲ್ಲ ನಾವು
ಕೊರೆವ ತಣ್ಣೀರು ..
ಬಸವನ ತತ್ವ
ಭೋದಿಯ ಸತ್ವ
ಭೂಮಿಗೆ ತಂದೋರು
ಕೊಂದವರ ಎದೆಯ ಒಳಗೂ ಪ್ರೀತಿಯ ಬಿತ್ತೊರು ..
ಮಾರಿಕೊಂಡೋರ
ಮಾನಬಿಟ್ಟೋರು
ಮನೆಯ ಕಾದೋರು
ಸ್ವಾಭಿಮಾನದ ಹಾಡುಕಟ್ಟುತ್ತಾ
ಕನಸಾ ಕಾಣೋರು ...
ಸಿಡಿದಿದ್ದೇ ಆದರೇ
ಸಾವಿರ ಸೂರ್ಯರೂ ಸುಟ್ಟುಹೋದಾರು ...
ಸ್ವಾಭಿಮಾನದ ಮಹಾಕ್ರಾಂತಿಗೆ ನಾಂಧಿಯಾಡೋರು ..
ಸಿಡಿವ ಬಂಡೆಗಳಲ್ಲ ನಾವು
ಬಂಡ ಎದೆಗಳ ಕೊರೆವ ತಣ್ಣೀರು ...
ನೀಲಿ ಬಾನ ಕೆಂಪು ಸೂರ್ಯನ ಎಂದೂ ನಂಬೋರು.