×
Ad

ಫಾತಿಮಾ ಪ್ರಾಥಮಿಕ ಶಾಲೆ ವಿಭಾಗ ಮಟ್ಟಕ್ಕೆ ಆಯ್ಕೆ

Update: 2016-10-05 22:17 IST

ಸುಂಟಿಕೊಪ್ಪ, ಅ.5: ಕುಶಾಲನಗರದ ಫಾತಿಮಾ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಬಾಲಕರ ಥ್ರೋಬಾಲ್ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನಡೆದ ಪ್ರಾಥಮಿಕ ಶಾಲಾ ಮಕ್ಕಳ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಫಾತಿಮಾ ಹಿರಿಯ ಪ್ರಾಥಮಿಕ ಶಾಲಾ ಬಾಲಕರು ಥ್ರೋಬಾಲ್‌ನಲ್ಲಿ ಪ್ರಥಮ, ಬಾಲಕಿಯರು ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ, ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆಯಲ್ಲಿರುವ ವಿಭಾಗಿಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಮುಖ್ಯ ಶಿಕ್ಷಕಿ ಸಿಸ್ಟರ್ ರೋಸಾಲಿನ್, ಪ್ರೌಢಶಾಲೆಯ ಮುಖ್ಯ ಸಿಸ್ಟರ್ ನಿರ್ಮಲಾ ಅವರು ಮಕ್ಕಳು ಸಾಧನೆಯನ್ನು ಪ್ರಶಂಸಿದರಲ್ಲದೆ, ಹೆಚ್ಚಿನ ಸಾಧನೆಗೈಯುವಂತೆ ಶುಭ ಹಾರೈಸಿದರು. ಈ ಸಾಧನೆಗೆ ಶಾಲೆಯ ತರಬೇತುದಾರರಾದ ದೈಹಿಕ ಶಿಕ್ಷಣ ಶಿಕ್ಷಕರಾದ ಕುಸುಮಾ ಹಾಗೂ ಸಂತೋಷ್ ಅವರನ್ನು ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News