ಹಾಸನ ತಲುಪಿದ 'ಚಲೋ ಉಡುಪಿ' ಜಾಥಾ
Update: 2016-10-06 12:57 IST
ಹಾಸನ, ಅ.6: ಚಲೋ ಉಡುಪಿ ಸ್ವಾಭಿಮಾನಿ ಸಂಘರ್ಷ ಜಾಥಾವು ಇಂದು ಹಾಸನ ತಲುಪಿತು.
ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಎಂಬ ಘೋಷಣೆ ಇಟ್ಟುಕೊಂಡು ಅಕ್ಟೋಬರ್ 04 ರಂದು ಈ ಜಾಥಾ ಹೊರಟಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಚಾಲನೆಗೊಂಡಿದ್ದ ಸ್ವಾಭಿಮಾನಿ ಸಂಘರ್ಷ ಜಾಥಾ ನೆಲಮಂಗಲ, ಕುಣಿಗಲ್, ಚನ್ನರಾಯಪಟ್ಟಣ, ಹೊಳೆನರಸೀಪುರ ಮಾರ್ಗವಾಗಿ ಇಂದು ಹಾಸನ ತಲುಪಿದೆ.
ಹಾಸನದ ದಲಿತಪರ, ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಜಾಥಾ ತಂಡವನ್ನು ಸ್ವಾಗತಿಸಿದರು. ಹಾಸನದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿ ಬಹಿರಂಗ ಸಭೆ ನಡೆಸಲಾಗುವುದು.