×
Ad

‘ಚಲೋ ಉಡುಪಿ’ ಕಾರ್ಯಕ್ರಮವನ್ನು ನಾನು ಬೆಂಬಲಿಸುತ್ತೇನೆ, ಯಾಕೆಂದರೆ…

Update: 2016-10-06 16:02 IST

ಖೈರ್ಲಾಂಜಿ ಎಂಬ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಭೋತ್ಮಾಂಗೆ ದಲಿತ ಕುಟುಂಬದ ಹತ್ಯಾಕಾಂಡ ನಡೆದು ಸರಿಯಾಗಿ ಹತ್ತುವರ್ಷಗಳಾದವು. ಆದರೆ ದೇಶಾದ್ಯಂತ ತೀವ್ರ ವಿರೋಧ,

ಸಂಚಲನ ಹುಟ್ಟಿಸಿದ್ದ ಪ್ರಕರಣದಲ್ಲಿ ಅತ್ಯಾಚಾರ, ಕೊಲೆ ಮಾಡಿದ ೩೮ಅಪರಾಧಿಗಳು ದೋಷಮುಕ್ತರಾಗಿ ಓಡಾಡಿಕೊಂಡಿದ್ದಾರೆ!

 ದಲಿತ ಸಂಘಟನೆಗಳಷ್ಟೇ ಅಲ್ಲದೆ ದೇಶವಿದೇಶಗಳ ಜನಪರ ಚಿಂತಕರ ಗಮನಸೆಳೆದಿದ್ದ ಪ್ರಕರಣವೇ ಹೀಗೆ ಹಳ್ಳ ಹಿಡಿದಿದ್ದರೆ, ಇನ್ನು ದಿನನಿತ್ಯ ನಡೆವ ಲೆಕ್ಕವಿಲ್ಲದಷ್ಟು ದಲಿತ ದೌರ್ಜನ್ಯ ಪ್ರಕರಣಗಳ ಗತಿಏನಾಗಬಹುದು?

ನೀವು ಊಹಿಸಿದಂತೆ ಪ್ರಕರಣಗಳು ಬೆಳಕಿಗೇ ಬಾರದೇ, ಬಂದರೂ ಅವು ಪ್ರಕರಣಗಳೆಂದು ದಾಖಲೆಯೇ ಆಗದೆ,ದಾಖಲಾದುವೂ 

‘ಸೂಕ್ತ ಸಾಕ್ಷ್ಯಾಧಾರ’ಗಳಿಲ್ಲದೆ ಖುಲಾಸೆಯಾಗುತ್ತಿವೆ. ದಲಿತರ ಮೇಲಿನ ದೌರ್ಜನ್ಯ ನಿರಂತರವಾಗಿ ಮುಂದುವರೆಯುತ್ತಿದೆ. 

ಇದೇವೇಳೆ ಜಾಗತಿಕ ವ್ಯಾಪಾರಿಗಳು ಜನಭರಿತ ಭಾರತದ ಬಡಜನರ ಎಲುಬು ಮಾಂಸಗಳನ್ನು ಮಾರುಕಟ್ಟೆಯ ವೇಷದಲ್ಲಿ ಕಿತ್ತುತಿನ್ನುತ್ತಿದ್ದರೆ,

‘ಮೇಕ್ ಇನ್ ಇಂಡಿಯಾ’ ನೆಪದಲ್ಲಿ ಭಾರತದ ಬಂಡವಾಳಿಗರು ದೇಶವಾಸಿಗಳ ಸಂಪನ್ಮೂಲಗಳನ್ನು ಯೋಜನೆ ಅಭಿವೃದ್ಧಿ ಹೆಸರಲ್ಲಿ ಕಬಳಿಸುತ್ತಿದ್ದಾರೆ.

ಯಾವುದೇ ರೀತಿಯಿಂದ ನೋಡಿದರೂ ಈ ಭವ್ಯ ಭಾರತದ ದಮನಿತ-ಶೋಷಿತ-ವಂಚಿತ ವ್ಯಕ್ತಿ ದಲಿತ ಆಗಿರುವುದು ಕಂಡುಬರುತ್ತಿದೆ. 

ಹಾಗಾದರೆ ವಂಚಿತರು ತಲೆಯೆತ್ತಿ ನಿಲ್ಲುವಂತೆ ಮಾಡಬಲ್ಲ ಹೊರದಾರಿ ಯಾವುದು? 

ಅದು ಅಂಬೇಡ್ಕರ್ ತುಳಿದ ಸಂಘಟನೆ, ಹೋರಾಟ ಮತ್ತು ಹಕ್ಕು ಜಾಗೃತಿಯದು.

ಎಂದೇ ಉಡುಪಿ ಚಲೋ..