ದೇವಣಗೇರಿಯಲ್ಲಿ ಗ್ರಾಮೀಣ ಜನಪದೋತ್ಸವ

Update: 2016-10-06 16:36 GMT

ಮಡಿಕೇರಿ, ಅ.6: ಜಿಲ್ಲೆಯ ವೀರಾಜಪೇಟೆ ತಾಲೂಕಿನ ದೇವಣಗೇರಿಯಲ್ಲಿ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಕೊಡಗು ಜಾನಪದ ಪರಿಷತ್ ಗ್ರಾಮೀಣ ಜನಪದೋತ್ಸವ ಕಾರ್ಯಕ್ರಮ ಜರಗಿತು.

ವೀರಾಜಪೇಟೆಯ ಬೈರನಾಡು- ಚೆಂಬೆಬೆಳಿಯೂರು ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಜನಪದೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ಥಳೀಯ ಗ್ರಾಮೀಣ ಜನಪದ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳಾದ ಬಾಳೋಪಾಟ್, ಉಮ್ಮತ್ತಾಟ್, ಕೋಲಾಟ, ನರಿಪೂದ, ಅಜ್ಜಪ್ಪ, ತಾಯವ್ವ, ಕೋಲ, ದೋಳ್ ಪಾಟ್, ಸಮ್ಮಂಧ ಆಡ್ಕುವ, ಉರ್‌ಟಿಕೊಟ್ಟ್‌ಪಾಟ್, ವಾಲಗತಾಟ್, ಅಜ್ಜಪ್ಪ ಕೋಲ ಮತ್ತಿತರ ಆಕರ್ಷಕ ಪ್ರದರ್ಶನಗಳು ಸೇರಿದಂತೆ ಶಾಲಾ ಮಕ್ಕಳಿಗೆ ಬುಗುರಿ, ಚಿಲ್ಕಿ, ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಬಿಸಿ ಪ್ರೌಢಶಾಲೆಯ ಅಧ್ಯಕ್ಷ ಮುಕ್ಕಾಟಿರ ಸುನೀಲ್ ನಾಣಯ್ಯ ವಾಲಗ ಪರಿಕರವನ್ನು ಊದುವ ಮೂಲಕ ಜನಪದೋತ್ಸವಕ್ಕೆ ಚಾಲನೆ ನೀಡಿದರು. ಕರ್ನಾಟಕ ಜಾನಪದ ಪರಿಷತ್‌ನ ಗೌರವ ಕಾರ್ಯದರ್ಶಿ ಎಚ್.ಆರ್.ರಾಜೇಗೌಡ ತೆಂಗಿನ ಗಿಡ ನೆಟ್ಟರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಕಲಾ ಪೋಷಕಿ ಪುಗ್ಗೇರ ಪೂವಮ್ಮ ಕರುಂಬಯ್ಯ ಅವರನ್ನು ಗಣ್ಯರು ಸನ್ಮಾನಿಸಿದರು. ಈ ಸಂದಭರ್ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್‌ನ ಗೌರವ ಕಾರ್ಯದರ್ಶಿ ಎಚ್.ಆರ್.ರಾಜೇಗೌಡ, ರಾಜ್ಯದಲ್ಲಿ ಜಾನಪದ ಕಲೆ, ಸಂಸ್ಕೃತಿಗಳನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಜಾನಪದ ಪರಿಷತ್ ವತಿಯಿಂದ ಹತ್ತು ಹಲವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಜನಪದೋತ್ಸವಗಳನ್ನು ಏರ್ಪಡಿಸಲಾಗಿದ್ದು ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಅಡಗಿರುವ ಸ್ಥಳೀಯ ಜಾನಪದ ಕಲೆ-ಸಂಸ್ಕೃತಿ ಆಚಾರ ವಿಚಾರಗಳನ್ನು ಪ್ರೋತ್ಸಾಹಿಸುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು. ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಪರಿಷತ್‌ನ ಜಿಲ್ಲಾ ಸಂಚಾಲಕ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿದರು.ಈ ಸಂದಭರ್ದಲ್ಲಿ ಹಲವಾರು ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News