ಶಾಲೆಗೆ ಕ್ರೀಡಾಂಗಣ ಅತ್ಯಗತ್ಯ: ಶಾಸಕ ಸತೀಶ್ ಸೈಲ್

Update: 2016-10-06 16:39 GMT

ಅಂಕೋಲಾ, ಅ.6: ಒಂದು ಶಾಲೆಯೆಂದರೆ ಅದಕ್ಕೆ ಮೈದಾನವೂ ಕೂಡ ಅತೀ ಅಗತ್ಯವಾದದ್ದು. ಇಲ್ಲಿಯ ವಿದ್ಯಾರ್ಥಿಗಳಿಗೆ ಆಟೋಟಕ್ಕಾಗಿ ನಾಲ್ಕು ಗುಂಟೆ ಜಾಗವನ್ನು ದಾನಿಗಳಿಂದ ಹಣ ಪಡೆದು ಶಾಲೆಯ ಹೆಸರಿಗೆ ನೋಂದಾಯಿಸಲಾಗುವುದು ಎಂದು ಶಾಸಕ ಸತೀಶ್ ಸೈಲ್ ಅಭಿಪ್ರಾಯಪಟ್ಟರು.

ಪಟ್ಟಣದ ಜೋಗಳಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾತನಾಡಿದರು. ನಾಲ್ಕು ಗುಂಟೆ ಜಾಗಕ್ಕೆ 10 ಲಕ್ಷ ರೂ. ಅಗತ್ಯವಿದ್ದು, ಅದನ್ನು 10 ದಾನಿಗಳಿಂದ ಸಂಗ್ರಹಿಸಿ ಶಾಲೆಯ ಮೈದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

 ಸುರೇಶ್ ಆರ್. ನಾಯಕ, ಸುರೇಶ್ ವೆರ್ಣೇಕರ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಕಾಂತ ಆರ್.ನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ರಾಜೇಂದ್ರ ನಾಯಕ, ಮುಖ್ಯಾಧ್ಯಾಪಕ ಎಲ್.ವಿ.ಗೌಡ, ಮಾಜಿ ಶಾಸಕ ಕೆ.ಎಚ್. ಗೌಡ, ಪ್ರಮುಖರಾದ ನಾಗೇಶ ನಾಯ್ಕ (ಆಚಾ), ವಿ.ಸಿ.ನಾಯ್ಕ, ಪುರುಷೋತ್ತಮ ಡಿ. ನಾಯ್ಕ, ಗಣಪತಿ ಗುನಗಾ, ಪುರಸಭೆ ಸದಸ್ಯ ವಿಶ್ವನಾಥ ನಾಯ್ಕ ಇತರರಿದ್ದರು. ಶಿಕ್ಷಕಿ ಉಮಾ ಎನ್. ಪಟಗಾರ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News