ಚಲೋ ಉಡುಪಿ:ಭಾವಲಹರಿಯಲ್ಲಿ ವಿಕಾಸ ಅರ್ ಮೌರ್ಯ
Update: 2016-10-08 17:49 IST
ಗಿರಗಿಟ್ಲೆ
ಟಮ ಟಮ ಟಮ ಟಮ ತಮಟೆಯ ಸದ್ದಿಗೆ
ಪಟ ಪಟ ಪಟ ಪಟ ಪಟಾಕಿ ಸತ್ತಿದೆ
ಗುಡು ಗುಡು ಗುಡು ಗುಡು ಗುಡುಗೋ ಗತ್ತಿಗೆ
ಘಣ ಘಣ ಘಣ ಘಣ ಘಂಟೆಯು ನಡುಗಿದೆ
ಪಾದದ ಹೊಡೆತಕ್ಕೆ
ತಲೆಯ ತುಂಬಾ ಗಿರಗಿಟ್ಲೆ
ಉರಿ ಉರಿ ಉರಿ ಉರಿ ಉರಿಗಣ್ಣೆದುರು
ಪಿಳಿ ಪಿಳಿ ಪಿಳಿ ಪಿಳಿ ಪಿಳಿಗಣ್ಮುಚ್ಚಿವೆ
ಕುದಿ ಕುದಿ ಕುದಿ ಕುದಿ ಕುದಿನೀರೆದುರು
ಘನ ಘನ ಘನ ಘನ ಘನಮಂಜು ಕರಗಿದೆ
ಕಪ್ಪಿರುವೆ ಕಡಿತಕ್ಕೆ
ಮೈ ತುಂಬಾ ಗಿರಗಿಟ್ಲೆ
ಬಳ ಬಳ ಬಳ ಬಳ ಬಳೆಗರ್ಜನೆಗೆ
ಮಿರಿ ಮಿರಿ ಮಿರಿ ಮಿರಿ ಮೀಸೆಯು ಬೆವರಿದೆ
ರಣ ರಣ ರಣ ರಣ ರಣರಂಗದಲಿ
ಪಣ ಪಣ ಪಣ ಪಣ ಪಣ ತೊಟ್ಟಿಹರೋ
ಪಂಚಮರ ಪರುಸೆಗೆ
ದ್ವಿಜರೆಲ್ಲಾ ಗಿರಗಿಟ್ಲೆ
ಸಿಡಿ ಸಿಡಿ ಸಿಡಿ ಸಿಡಿ ಸಿಡಿಗುಂಡಿಗೆಗಳು
ಭರ ಭರ ಭರ ಭರ ಭರಸಿಡಿಲಾಗಿವೆ
ದಿಟ ದಿಟ ದಿಟ ದಿಟ ದಿಟದುಡಿವವರು
ಕಟ ಕಟ ಕಟ ಕಟ ಹಲ್ಕಡಿದವರೆ
ನೊಂದವರ ಕುಣಿತಕ್ಕೆ
ನೆಲವೆಲ್ಲಾ ಗಿರಗಿಟ್ಲೆ
ವಿಕಾಸ ಆರ್ ಮೌರ್ಯ