ತಲಾಖ್ ವಿಚಾರದಲ್ಲಿ ಕೇಂದ್ರದ ಹಸ್ತಕ್ಷೇಪ ಖಂಡನೀಯ: ಎಸ್ಕೆಎಸ್ಸೆಸ್ಸೆಫ್
Update: 2016-10-08 21:35 IST
ಬೆಂಗಳೂರು, ಅ.8: ತಲಾಖ್ ಇಸ್ಲಾಮಿನ ಧಾರ್ಮಿಕ ವಿಷಯವಾಗಿದ್ದು ಅದರಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವುದು ಧಾರ್ಮಿಕ ಹಕ್ಕಿನ ಹರಣವಾಗಿದೆ ಮತ್ತು ಖಂಡನೀಯವಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕದ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಪ್ರತಿ ನಿಮಿಷಕ್ಕೆ ಮೂರರಂತೆ ಅತ್ಯಾಚಾರ ನಡೆಯುತ್ತಿದೆ. ಪ್ರತಿದಿನ ಸಾವಿರಾರು ಮಂದಿ ಹಸಿವಿನಿಂದ ಸಾಯುತ್ತಿದ್ದಾರೆ. ಹೀಗೆ ನೂರಾರು ಸಮಸ್ಯೆಗಳಿರುವಾಗ ಅವುಗಳಿಗೆ ಪರಿಹಾರ ಹುಡುವುದರ ಬದಲು ಧಾರ್ಮಿಕ ನಂಬಿಕೆಗಳಿಗೆ ಕುತ್ತು ತರಲು ಶ್ರಮಿಸುವುದರಲ್ಲಿ ದುರುದ್ದೇಶವಿರುವುದು ಪ್ರತ್ಯಕ್ಷವಾಗಿ ತಿಳಿದುಬರುತ್ತಿದೆ ಎಂದು ಅನೀಸ್ ಕೌಸರಿ ಆರೋಪಿಸಿದ್ದಾರೆ.