×
Ad

ಶರಾವತಿ ಕುಡಿಯುವ ನೀರು ಸರಬರಾಜು ಯೋಜನೆ ಶೀಘ್ರ ಜಾರಿ:ಶಾಸಕಿ ಶಾರದಾ.ಎಂ.ಶೆಟ್ಟಿ

Update: 2016-10-11 22:28 IST

 ಹೊನ್ನಾವರ,ಅ.11: ಸುಮಾರು 108 ಕೋಟಿ ರೂಪಾಯಿ ವೆಚ್ಚದ ಹೊನ್ನಾವರ ಪಟ್ಟಣಕ್ಕೆ ಅತೀ ಅವಶ್ಯವಿರುವ ಶರಾವತಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸರಕಾರದ ಮಟ್ಟದಲ್ಲಿ ಗಮನಕ್ಕೆ ತಂದು ಅತೀ ಶೀಘ್ರದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸಲಾಗುವುದು ಎಂದು ಶಾಸಕಿ ಶಾರದಾ.ಎಂ.ಶೆಟ್ಟಿ ತಿಳಿಸಿದರು.

ಅವರು ಪಟ್ಟಣದ ದುರ್ಗಾಕೇರಿಯಲ್ಲಿರುವ ಗುರು ನಾಟ್ಯ ಸ   ಂಘದ ವೇದಿಕೆಯ ಮುಂಭಾಗದಲ್ಲಿ ಸುಮಾರು 5 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ತಮ್ಮ ಅನುದಾನದಲ್ಲಿ ನಿರ್ಮಾಣಗೊಂಡ ಇಂಟರ್ ಲೋಕ್ ಕಾಮಗಾರಿಯನ್ನು ಉದ್ಘಾಟಿಸಿದ ನಂತರ ಲಕ್ಷೀನಾರಾಯಣ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನೆರೆದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

       ನಾನು ಹೊನ್ನಾವರ ಭಾಗದ ಅಭಿವೃದ್ಧಿಗೆ ವಿಶೇಷ ಆಸಕ್ತಿ ಹೊಂದಿದ್ದೇನೆ. ಈಗಾಗಲೇ ಅನೇಕ ಜನೋಪಯೋಗಿ ಯೋಜನೆಗಳಿಗೆ ಚಾಲನೆ ನೀಡಿರುತ್ತೇನೆ. ಹೊನ್ನಾವರ ಪಟ್ಟಣದ ಅಭಿವೃದ್ಧಿಗೆ 2 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಸರಕಾರದಿಂದ ತಂದಿದ್ದು ಪಟ್ಟಣದ ಎಲ್ಲಾ ವಾರ್ಡಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಪಟ್ಟಣದ ಜನರ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಸುಮಾರು 8 ವರ್ಷಗಳಿಂದ ನೆನೆಗುದಿಗೆ ಗೆ ಬಿದ್ದಿದ್ದ 30 ಕೋಟಿ ರೂಪಾಯಿ ವೆಚ್ಚದ ಒಳಚರಂಡಿ ಯೋಜನೆಯನ್ನು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. ಈ ಯೋಜನೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ.ದೇಶಪಾಂಡೆ ಆಗಮಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕಾರಣ ಈ ಯೋಜನೆಯ ಯಶಸ್ಸಿಗೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವಂತೆ ಶಾಸಕಿ ಶಾರದಾ ಎಂ.ಶೆಟ್ಟಿ ಮನವಿ ಮಾಡಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ್ .ಎನ್. ತೆಂಗೇರಿ ಕಳೆದ ಹತ್ತಾರು ವರ್ಷಗಳಿಂದ ದುರ್ಗಾಕೇರಿಯ ಈ ವೇದಿಕೆಯ ಮುಂಭಾಗದಲ್ಲಿ ಇಂಟರ್ ಲೋಕ್ ಕಾಮಗಾರಿ ಮಾಡಿಕೊಡುವಂತೆ ಸ್ಥಳೀಯರು ಅನೇಕ ಮುಖಂಡರಿಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿರಲಿಲ್ಲ. ಆದರೆ ಶಾಸಕಿ ಶಾರದಾ ಎಂ. ಶೆಟ್ಟಿಯವರ ಗಮನಕ್ಕೆ ತಂದ ಒಂದೇ ವಾರದಲ್ಲಿ ಕಾಮಗಾರಿ ಮುಗಿಸಿ ಅವರ ಕೈಯಾರೇ ಉದ್ಘಾಟನೆಗೊಂಡಿರುವುದು ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲಕ್ಷೀನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಬಿ ನಾಯ್ಕ ಮಾತನಾಡಿ, ಹೊನ್ನಾವರದಲ್ಲಿ ಯಾವುದೇ ಉತ್ತಮ ಕಾರ್ಯಮಾಡುವಾಗ ಶಾಸಕಿ ಶಾರದಾ ಎಂ ಶೆಟ್ಟಿಯವರು ಶ್ರೀ ಲಕ್ಷೀನಾರಾಯಣ ದೇವರ ಆಶೀರ್ವಾದ ಪಡೆಯುತ್ತಿದ್ದು ಕಳೆದ ವಿಧಾನಸಭಾ ಚುನಾವಣಾ ಪ್ರಚಾರ ಸಭೆ ಇಲ್ಲಿಂದಲೇ ಆರಂಭಿಸಿ ಯಶಸ್ವಿಯಾಗಿರುವುದನ್ನು ನೆನಪಿಸಿ ಮುಂದೆಯೂ ಕೂಡ ತಮ್ಮಿಂದ ಕುಮಟಾ-ಹೊನ್ನಾವರ ಕ್ಷೇತ್ರದ ಅಭಿವೃದ್ಧಿ ಪ್ರಗತಿ ಪಥದಲ್ಲಿ ಸಾಗಲಿ ಎಂದರು. ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರು , ದಂಡಿನ ದುರ್ಗಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಎ.ಎನ್.ಮೇಸ್ತರವರು ಶಾಸಕಿಯನ್ನು ಸನ್ಮಾನಿಸಿ ಮಾತನಾಡಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷೆ ಜೈನಾಬಿ ಸಾಬ, ಹುಸೈನ ಖಾದ್ರಿ ಮುಂತಾದವರು ಮಾತನಾಡಿದರು. ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸು ರೇಶ ಮೇಸ್ತ, ಸದಸ್ಯರುಗಳಾದ ಎಸ್.ಎಂ.ನಾಯ್ಕ, ಬಾಲಕೃಷ್ಣ ಬಾಳೇರಿ, ದಾಮೋದರ ಮೇಸ್ತ, ಸುರೇಶ ಶೇಟ್ , ಮಂಜುನಾಥ ಖಾರ್ವಿ, ಅಶೋಕ.ಜಿ.ನಾಯ್ಕ, ಸಾರ್ವಜನಿಕ ದಂಡಿನ ದುರ್ಗಾದೇವಿ ದೇವಿಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ ಕಾಮತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News