ಆರದವಳ್ಳಿ ಗ್ರಾಮದಲ್ಲಿ ಸಂಭ್ರಮದ ದಸರಾ: ಅಂಬು ಮಹೋತ್ಸವ ಆಚರಣೆ
ಚಿಕ್ಕಮಗಳೂರು, ಅ.11: ಸಮೀಪದ ಅಂಬಳೆ ಹೋಬಳಿ ಆರದವಳ್ಳಿ ಗ್ರಾಮದಲ್ಲಿ ದಸರಾ ಮಹೋತ್ಸವ, ಶರನ್ನವರಾತ್ರಿ ಪೂಜ ಮಹೋತ್ಸವ ಹಾಗೂ ವಿಜಯದಶಮಿಯ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಯವರ ಅಂಬು ಮಹೋತ್ವವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಗ್ರಾಮ ದೇವತೆಗಳಾದ ಶ್ರೀ ಆಂಜನೇಯ ಸ್ವಾಮಿ, ಮಲ್ಲೇಶ್ವರ ಸ್ವಾಮಿ, ಮಾರಮ್ಮ ದೇವಿ ಹಾಗೂ ಭೂತಪ್ಪಸ್ವಾಮಿಯವರ ಉತ್ಸವ ನಡೆಯಿತು. ವಿಜಯದಶಮಿ ಅಂಗವಾಗಿ ಅಂಬು ಹೊಡೆಯುವ ಕಾರ್ಯಕ್ರಮವನ್ನು ಗ್ರಾಮದ ಪಟೇಲರ ವಂಶಸ್ಥ ಹಾಗೂ ಜಿಪಂ ಮಾಜಿ ಅಧ್ಯಕ್ಷ ಹಾಗೂ ಎ.ಎನ್.ಮಹೇಶ್ ನೆರವೇರಿಸಿದರು.
ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ ನಂತರ ಬನ್ನಿ ಮರದ ಬಳಿ ತೆರಳಿ ಶಮಿ ಪೂಜೆ ನೇರವೇರಿಸಿದ ನಂತರ ಊರಿನ ದೊಡ್ಡಕೆರೆ ಬಳಿ ಏರ್ಪಡಿಸಿದ್ದ ಅಂಬು ಹೊಡೆಯುವ ಕಾರ್ಯಕ್ರಮದಲ್ಲಿ ಎ.ಎನ್. ಮಹೇಶ್ ಬಾಳೆಗೊನೆಗೆ ಬಿಲ್ಲು ಹೂಡಿದರು. ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಊರಿನಲ್ಲಿ ಒಗ್ಗಟ್ಟು ನೆಲೆಸಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಎಲ್ಲಾ ಗ್ರಾಮದಲ್ಲಿಯೂ ನಡೆಯಬೇಕು. ಕಳೆದ 19 ವರ್ಷಗಳಿಂದ ನಡೆಯುತ್ತಿರುವ ವಿಜಯದಶಮಿ ಉತ್ಸವ ನಿರಂತರವಾಗಿ ನಡೆಯಬೇಕು. ಅದಕ್ಕೆ ಗ್ರಾಮಸ್ಥರೆಲ್ಲರೂ ಸಹಕರಿಬೇಕೆಂದರು. ನಾಡಿನಲ್ಲಿ ಬರ ಆವರಿಸಿದ್ದು ಅದನ್ನು ಎದುರಿಸುವಲ್ಲಿ ಎಲ್ಲರ ಸಹಕಾರ ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ಜನಸ್ಪಂದನಾ ಡೆವಲಪ್‌ಮೆಂಟ್ ಸೊಸೈಟಿ ಎಸ್.ಬಿ.ರಾಮಚಂದ್ರಪ್ಪ ಆರದವಳ್ಳಿ ಗ್ರಾಮ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಈ ವೇಳೆ ತಾಪಂ ಸದಸ್ಯರಾದ ಜಯಣ್ಣ, ಗ್ರಾಪಂ ಉಪಾಧ್ಯಕ್ಷ ಎ.ಎಂ. ಮಲ್ಲೇಶಗೌಡ, ಸದಸ್ಯರಾದ ಸತ್ಯಮ್ಮ, ಲತಾ ಜಯಣ್ಣ, ಯಶೋದಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಎ.ಎಂ. ಕುಮಾರ್, ಮುಖಂಡರಾದ ಎ.ಎಂ. ನಿಂಗೇಗೌಡ, ಮಲ್ಲೇಶಗೌಡ, ಎ.ಪಿ. ಜಯಣ್ಣ, ಎ.ಆರ್. ಪ್ರಸನ್ನ, ಎ.ಎಂ. ನಿಂಗೇಗೌಡ, ಕೆ.ಎಂ. ಕೇಪೇಗೌಡ, ದಾಕ್ಷಾಯಿಣಿ ನಿಂಗೇಗೌಡ, ವೀರತ್ತೆಗೌಡ, ಎ.ವಿ.ನಾಗರಾಜ್, ಎ.ಎಂ.ಷಡಕ್ಷರಿ, ಎ.ಬಿ.ಯೋಗೀಶ್ ಉಪಸ್ಥಿತರಿದ್ದರು.