ಕಾರವಾರ: ಭಾರೀ ಮಳೆಗೆ ಗುಡ್ಡ ಕುಸಿತ
ಕಾರವಾರ, ಅ.11: ಕಳೆದ ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಮುದಗಾದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿದು ಹೆದ್ದಾರಿಯ ಸಂಚಾರ ಮಂಗಳವಾರ ಅಸ್ತವ್ಯಸ್ತಗೊಂಡಿತು.
ಎಡೆಬಿಡದೆ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಗುಡ್ಡದಲ್ಲಿನ ಬಂಡೆಕಲ್ಲುಗಳು ಸಹಿತ ಮಣ್ಣು ಬಿದ್ದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡವು.ಅಲ್ಲದೆ, ಜಿಲ್ಲೆಯ ಕರಾವಳಿಯ ಅಲ್ಲಲ್ಲಿ ಗುಡ್ಡ ಕುಸಿತ, ತಗ್ಗು ಪ್ರದೇಶ ಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ ಘಟನೆಗಳೂ ವರದಿಯಾಗಿವೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯನ್ನು ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಮುದಗಾದ ಹೆದ್ದಾರಿ ಮೇಲೆ ಬಿದ್ದಿದ್ದ ಬೃಹತ್ ಬಂಡೆಕಲ್ಲು, ಮಣ್ಣನ್ನು ತೆರವುಗೊಳಿಸುವ ಕಾರ್ಯಾ ಚರಣೆ ನಡೆಸಿತು. ಮಧ್ಯಾಹ್ನದ ವೇಳೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಗುಡ್ಡ ಕುಸಿತಗೊಂಡ ಎರಡು ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಗೋವಾ, ಮಂಗಳೂರು, ಹುಬ್ಬಳ್ಳಿ ಭಾಗಕ್ಕೆ ತೆರಳಬೇಕಾಗಿದ್ದ ಪ್ರಯಾಣಿಕರು ತೀವ್ರ ತೊಂದರೆ ಪಡುವಂತಾಯಿತು. ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಸೂಕ್ತ ಮಳೆಯಾಗಿರಲಿಲ್ಲ. ಸಂಬಂಧಪಟ್ಟ ಇಲಾಖೆಗಳ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈ ಬಾರಿ ಶೇ.20ರಷ್ಟು ಮಳೆ ಕಡಿಮೆಯಾಗಿದೆ. ಆದರೆ, ಕಳೆದ ಎರಡು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಮುದಗಾದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ರಸ್ತೆ ಪಕ್ಕದಲ್ಲಿ ಬೃಹತ್ ಗುಡ್ಡದಂತೆ ನಿಂತಿದ್ದ ಈ ಬಂಡೆಗಲ್ಲುಗಳನ್ನು ಐಆರ್‌ಬಿ ಕಂಪೆನಿಗಳು ಸ್ಫೋಟಕಗಳನ್ನು ಬಳಸಿ ತೆರವುಗೊಳಿಸಿದ್ದ ಸಂದರ್ಭದಲ್ಲಿ ಸಡಿಲಗೊಂಡ ಗುಡ್ಡದ ಭಾಗಗಳು ಮಳೆಯ ಆರ್ಭಟಕ್ಕೆ ಕುಸಿಯಲು ಕಾರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನದಿಗೆ ಬಿದ್ದು ಯುವಕ