ಮೃತ ಕುಟುಂಬಗಳಿಗೆ ಪರಿಹಾರ ವಿತರಣೆ
Update: 2016-10-12 21:53 IST
ಶಿವಮೊಗ್ಗ, ಅ.12: ಇತ್ತೀಚೆಗೆ ಶಿವಮೊಗ್ಗ ಸಮೀಪದ ಹಾಡೋನಹಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮೃತ ಕುಟುಂಬಕ್ಕೆ ಜಿಲ್ಲಾಡಳಿತವು ತಲಾ 1ಲಕ್ಷ ರೂ. ಪರಿಹಾರಧನವನ್ನು ವಿತರಿಸಿದೆ.
ಮೃತ ಶಿವಕುಮಾರ್, ಜೀವನ್ ಎ.ಎಸ್., ಸಚಿನ್ ಎ.ಎಸ್., ಎಚ್.ವಿ.ಸಾಗರ್, ಗಣೇಶ್ , ಎಚ್.ಎಂ., ವೀರಭದ್ರ ಸಿ.ಎನ್., ಚಂದ್ರಪ್ಪ ಎಸ್., ರಮೇಶ್ ಎಚ್.ಒ., ಮಂಜುನಾಥ ಸಿ., ಪಿ.ಜೆ.ಶಂಕರ., ನಯನ್ ಕುಮಾರ್ ಮತ್ತು ಗಣೇಶ ಪಿ.ಬಿ. ಕುಟುಂಬದ ಪರಿವಾರದವರಿಗೆ ಚೆಕ್ ಮೂಲಕ ಪರಿಹಾರಧನವನ್ನು ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪಪ್ರಕಟನೆಯಲ್ಲಿ ತಿಳಿಸಿದ್ದಾರೆ.