ವಿವಿಧ ಕಾಮಗಾರಿಗಳಿಗೆ 27 ಕೋಟಿ ರೂ. ಅನುದಾನ ಬಿಡುಗಡೆ

Update: 2016-10-16 17:00 GMT

 ಕಡೂರು, ಅ. 16: ಕಡೂರು ವಿಧಾನಸಭಾ ಕೇತ್ರದಲ್ಲಿ ಶಾಶ್ವತವಾಗಿ ವಿದ್ಯುತ್ ಸಮಸ್ಯೆ ಪರಿಹರಿಸಲು ಸರಕಾರದಿಂದ ಈಗಾಗಲೇ 27 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಹಲವಾರು ಕಾಮಗಾರಿಗಳು ಮುಕ್ತಾಯವಾಗಿದ್ದು, ಉಳಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು. ಅವರು ಪಟ್ಟಣದ ತಂಗಲಿ 11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಡೂರು ಉಪ ವಿಭಾಗದ ಗ್ರಾಮಾಂತರ ಶಾಖೆಯ ವ್ಯಾಪ್ತಿಯ ಆಲಘಟ್ಟ ಮತ್ತು ಸುತ್ತ-ಮುತ್ತಲ ಗ್ರಾಮಗಳಿಗೆ ಹಾಗೂ ಮತಿಘಟ್ಟ ಶಾಖೆಯ ಕುಪ್ಪಾಳು ಮತ್ತು ಸುತ್ತ-ಮುತ್ತಲ ಗ್ರಾಮಗಳಿಗೆ ಉತ್ತಮ ವಿದ್ಯುತ್ ಸರಬರಾಜು ಮಾಡಲು ತಂಗಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸದಾಗಿ ರಚನೆಗೊಂಡ 11 ಕೆ.ವಿ. ಮಾರ್ಗಗಳನ್ನು ಚೇತನಗೊಳಿಸುವ ಸುಮಾರು 1.55 ಕೋಟಿ ರೂ. ಕಾಮಗಾರಿಯನ್ನು ಉದ್ಟಾಟಿಸಿ ಮಾತನಾಡಿದರು.

ಹಿಂದೆ ಟಿ.ಸಿಗಳ ದುರಸ್ತಿಗಾಗಿ ಭದ್ರಾವತಿಗೆ ತೆರಳಬೇಕಿತ್ತು, ಈಗ ಟಿಸಿಗಳ ದುರಸ್ತಿಗಾಗಿ ಬೇರೆಕಡೆ ಹೋಗದೆ, ನಮ್ಮಲ್ಲಿಯೇ ರಿಪೇರಿ ಕಾರ್ಯ ನಡೆಸಲು ದುರಸ್ತಿ ಕೇಂದ್ರ ಪ್ರಾರಂಭವಾಗಿದೆ. ಸೋಲಾರ್ ಎನರ್ಜಿ ಯುನಿಟ್ ಪ್ರಾರಂಭಿಸಲು 100 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ 100 ಎಕರೆ ಜಮೀನು ಬೇಕಿದ್ದು, ಈಗಾಗಲೇ ಜಾಗ ಗುರುತಿಸುವ ಪ್ರಕ್ರಿಯೇ ಪ್ರಾರಂಭವಾಗಿದೆ. ಈ ಘಟಕ ಸ್ಥಾಪನೆ ಮುಂದಿನ ಮೂರು ವರ್ಷಗಳಲ್ಲಿ ಪ್ರಾರಂಭವಾಗಲಿದೆ. ಅಲ್ಲದೆ ಇನ್ನೂ ಒಂದು ವರ್ಷದಲ್ಲಿ ಕ್ಷೇತ್ರದಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಇಲ್ಲದಂತೆ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದರು.

ಈ ಸಂದಭರ್ ಜಿಪಂ ಸದಸ್ಯರಾದ ಶರತ್, ಲಕ್ಕಮ್ಮಸಿದ್ದಪ್ಪ, ತಾಪಂ ಸದಸ್ಯ ತಿಮ್ಮಯ್ಯ, ಮೆಸ್ಕಾಂ ನಿರ್ದೇಶಕ ವಿ. ಜಯರಾಂ, ಕೆ.ಎಸ್. ಆನಂದ್, ಮತಿಘಟ್ಟ ಗ್ರಾಪಂ ಅಧ್ಯಕ್ಷೆ ಶೀಲಮ್ಮ, ತಂಗಲಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಕೆ.ಎಂ. ಮಹೇಶ್ವರಪ್ಪ, ಬೀರೂರು ಪುರಸಭಾ ಸದಸ್ಯ ಲೋಕೇಶಪ್ಪ, ಅಧಿಕಾರಿ ರೋಮರಾಜು, ಚಿದಾನಂದ್, ಗುತ್ತಿಗೆದಾರ ಬೋಜರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News