×
Ad

ಇಂದಾವರ-ಮಲ್ಲಂದೂರು ಎಕ್ಸ್‌ಪ್ರೆಸ್ ವಿದ್ಯುತ್‌ಲೈನ್‌ಗೆ ಚಾಲನೆ

Update: 2016-10-17 22:24 IST

ಚಿಕ್ಕಮಗಳೂರು, ಅ.17: ಹಲವು ದಶಕಗಳ ಬೇಡಿಕೆಯಾದ ಇಂದಾವರ-ಮಲ್ಲಂದೂರು ವರೆಗಿನ 22 ಕಿ.ಮೀ. ದೂರದ ವಿದ್ಯುತ್ ಎಕ್ಸ್‌ಪ್ರೆಸ್ ಲೈನ್‌ನ ಸುಮಾರು 1.5 ಕೋ.ರೂ ವೆಚ್ಚದ ಕಾಮಗಾರಿಗೆ ಮೆಸ್ಕಾಂ ಎಇಇ ಶಿವಕುಮಾರ್ ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸುಮಾರು 1.5 ಕೋ.ರೂ. ವೆಚ್ಚದಲ್ಲಿ ಆರಂಭಿಸಲಾಗಿರುವ 22 ಕಿ.ಮೀ. ದೂರದ ಇಂದಾವರ-ಮಲ್ಲಂದೂರು ವರೆಗಿನ ವಿದ್ಯುತ್ ಎಕ್ಸ್‌ಪ್ರೆಸ್ ಲೈನ್‌ನಿಂದ ಈ ಭಾಗದಲ್ಲಿನ ಗ್ರಾಮೀಣ ಪ್ರದೇಶದ ಮನೆಗಳು ಹಾಗೂ ಐಪಿ ಸೆಟ್‌ಗಳಿಗೆ ಅನುಕೂಲವಾಗಲಿದೆ ಎಂದರು.

 ಈಗಾಗಲೇ 1.5ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆಡಳಿತ ಮಂಜೂ

ಾತಿ ದೊರೆತಿದೆ. ಮಾನಸ ಇಲೆಕ್ಟ್ರಿಕಲ್ಸ್‌ಗೆ ಗುತ್ತಿಗೆ ನೀಡಿ 6 ರಿಂದ 12 ತಿಂಗಳಕಾಲ ಅವ ಕಾಶ ನೀಡಲಾಗಿದೆ. 40 ಮೀಟರ್‌ಗೆ ಒಂದು ಕಂಬ ದಂತೆ 750 ಕಂಬಗಳನ್ನು ಹಾಕಲು ಆಧುನಿಕ ಯಂತ್ರ ಬಳಸಲಾಗುತ್ತಿದೆ. ಆದ್ದರಿಂದ 3ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ನುಡಿದರು.

ಈ ಲೈನ್‌ಗೆ ಸಂಬಂಧಪಟ್ಟ 8,500 ಗ್ರಾಹಕರು ಹಾಗೂ ಅರಣ್ಯ ಇಲಾಖೆ ಸಹಕಾರ ನೀಡುವಂತೆ ಮನವಿ ಮಾಡಿದರು. ಪೂರ್ಣ ರಸ್ತೆ ಬದಿಯಲ್ಲೆ ಲೈನ್ ಹೋಗುವುದರಿಂದ ಜನರಿಗೆ ಹೆಚ್ಚು ತೊಂದರೆಯಾಗದು. 6ದಶಕಗಳ ಹಿಂದಿನ ಹಳೆಯ ವಿದ್ಯುತ್ ಲೈನ್‌ನೊಂದಿಗೆ 2ರಿಂದ 3 ಮೆಗಾ ವ್ಯಾಟ್ ಲೈನ್ ಹಾಕಲಾಗುತ್ತಿರುವ ಈ ಹೊಸ ಲೈನ್ ಪೂರ್ಣಗೊಂಡರೆ ಒಂದು ಭಾಗದ 4 ಸಾವಿರ ಮತ್ತೊಂದು ಭಾಗದ 4, 500 ಗ್ರಾಹಕರಿಗೆ ಸಮರ್ಪಕ ವಿದ್ಯುತ್ ನೀಡಲು ಅನುಕೂಲವಾಗಲಿದೆ ಎಂದು ನುಡಿದರು.

ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಮಾತನಾಡಿ, ಈ ಹೊಸ ಮಾರ್ಗಕ್ಕಾಗಿ ಹಲವು ಬಾರಿ ಮನವಿ ಮಾಡಲಾಗಿತ್ತು. ಅದರೊಂದಿಗೆ ಕಾಫಿಬೆಳೆಗಾರರ ಹಿತರಕ್ಷಣಾ ವೇದಿಕೆಯಿಂದ ಮಂಗಳೂರಿಗೆ ತೆರಳಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪಅವರಿಗೆ ವಾಸ್ತವತೆ ತಿಳಿಸಲಾಗಿತ್ತು. ಮಳೆಗಾಲ ಬಂತೆಂದರೆ ಬೆಳಕನ್ನೇ ಕಾಣುವುದು ಕಷ್ಟವಾಗಿದ್ದ ಈ ಭಾಗದ ಗ್ರಾಮಸ್ಥರಿಗೆ ಎಕ್ಸ್‌ಪ್ರೆಸ್ ಲೈನ್ ನಿಂದ ನಿರಂತರ ಬೆಳಕು ಕಾಣಬಹುದಾಗಿದೆ ಎಂದು ಹರ್ಷವ್ಯಕ್ತ ಪಡಿಸಿದರು.

ನೂತನ ವಿದ್ಯುತ್ ಲೈನ್ ಕಾಮಗಾರಿ ಪೂರ್ಣಗೊಳ್ಳುವವರೆಗೂ ಮೆಸ್ಕಾಂ ಅಧಿಕಾರಿ, ಸಿಬ್ಬಂದಿ ಮತ್ತು ಅರಣ್ಯ ಇಲಾಖೆಗೆ ರಸ್ತೆ ಬದಿಗಳಲ್ಲಿ ಜಂಗಲ್ ತೆರವುಗೊಳಿಸಲು ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟೇಗೌಡ, ಸದಸ್ಯ ಕುಮಾರ್, ಮಾಗೋಡು ಪರಮೇಶ್, ನಾಗರಾಜ್, ಅಪ್ಪು ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News