ಅರ್ನಬ್ ಗೆ ವೈ ದರ್ಜೆ ಭದ್ರತೆ: ದೇಶ ಕೇಳಬೇಕಾದ 9 ಪ್ರಶ್ನೆಗಳು

Update: 2016-10-18 06:18 GMT

ಮುಂಬೈ, ಅ.18:  ಟೈಮ್ಸ್ ನೌ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಕೆಲ ಪಾಕ್ ಉಗ್ರ ಗುಂಪುಗಳಿಂದ ಬೆದರಿಕೆ ಹಿನ್ನೆಲೆಯಲ್ಲಿ ವೈ ಭದ್ರತೆ ಒದಗಿಸುತ್ತಿರುವುದು ಸಾಕಷ್ಟು ಸ್ವಾರಸ್ಯಕರ ಚರ್ಚೆಗಳಿಗೆ ಕಾರಣವಾಗಿದೆ. ಅರ್ನಬ್ ರಕ್ಷಣೆಗೆ ಇನ್ನು 20 ಭದ್ರತಾ ಸಿಬ್ಬಂದಿ ಇರುತ್ತಾರೆ.

ಪತ್ರಕರ್ತರೊಬ್ಬರು, ಅವರು ಖ್ಯಾತಿವೆತ್ತವರೇ ಅಥವಾ ಸಾಕಷ್ಟು ಟೀಕೆಗೆ ಒಳಗಾದವರೇ ಇರಬಹುದು, ಅವರಿಗೆ ಬೆದರಿಕೆಯಿದೆಯೆಂದಾಗ ಸಹಜವಾಗಿ ಮಾಧ್ಯಮ ಎದ್ದು ನಿಂತು ಕೆಲವು ಪ್ರಶ್ನೆಗಳನ್ನು ಕೇಳಲೇ ಬೇಕಾಗಿದೆ. ಅರ್ನಬ್ ಗೆ ನೀಡಲಾಗುವ ಈ ವೈ ಭದ್ರತೆ ವಿಚಾರ ಅವರ ನ್ಯೂಸ್ ಅವರ್ ಡಿಬೇಟ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯುವುದೋ ಅಥವಾ ಇಲ್ಲವೋ ಎಂದು ತಿಳಿಯದಾದರೂ ಕೆಲವೊಂದು ಪ್ರಶ್ನೆಗಳನ್ನು ಇಲ್ಲಿ ಕೇಳಲೇ ಬೇಕಾಗಿದೆ.

1.ಬೆದರಿಕೆಯಿದೆಯೆಂದು ಗುಪ್ತಚರ ಬ್ಯೂರೋ ಹೇಗೆ ನಿರ್ಧಾರಕ್ಕೆ ಬಂದಿತು ? ಯಾವುದಾದರೂ ಉಗ್ರ ಸಂಘಟನೆಯ ಸದಸ್ಯರ ಸಂಭಾಷಣೆಯನ್ನು ಅದು ಆಲಿಸಿದೆಯೇ ?

2. ಯಾವ ಸಂಘಟನೆಗಳು ಅರ್ನಬ್ ರಿಂದ ಅವಮಾನಕ್ಕೀಡಾಗಿ ಅವರಿಗೆ ಬೆದರಿಕೆಯೊಡ್ಡಿವೆ ?

3. ಅವರಿಗೇಕೆ ವೈ ಭದ್ರತೆ ? ಝೆಡ್ ಅಥವಾ ಝೆಡ್ ಪ್ಲಸ್ ಭದ್ರತೆ ಏಕಿಲ್ಲ ?

4.ಟೈಮ್ಸ್ ನೌ ಸಂಪಾದಕರು ಮಾಡಿದ ಯಾವ ನಿರ್ದಿಷ್ಟ ಹೇಳಿಕೆಯಿಂದಾಗಿ ಅವರಿಗೆ ಬೆದರಿಕೆಯೊಡ್ಡಲಾಗಿದೆ ?

5. ಈ ಬೆದರಿಕೆ ಟೈಮ್ಸ್ ನೌ ಸಂಪಾದಕರಿಗಷ್ಟೇ ಹೌದೇ ಅಥವಾ ಸುದ್ದಿ ಸಂಸ್ಥೆಯ ಇತರರಿಗೂ ಬೆದರಿಕೆಯಿದೆಯೇ ? ದಾಳಿ ಸಂಭವಿಸಿದ್ದೇ ಆದಲ್ಲಿ ಸಿಬ್ಬಂದಿಗೂ ಕೂಡ ರಕ್ಷಣೆ ಬೇಕಲ್ಲವೇ ?

6. ಟೈಮ್ಸ್ ನೌ ಚರ್ಚಾ ಕಾರ್ಯಕ್ರಮಕ್ಕೆ ನಿಯಮಿತವಾಗಿ ಆಹ್ವಾನ ಪಡೆಯುವ ಅತಿಥಿಗಳಿಗೂ ರಕ್ಷಣೆ ಬೇಡವೇ ? ಅವರು ಸುರಕ್ಷಿತರೇ ?

7.ಈ ಪ್ರಮುಖ ಕಾರ್ಯಕ್ಕಾಗಿ ತೆರಿಗೆದಾರರ ಎಷ್ಟು ಹಣ ವ್ಯಯವಾಗುತ್ತದೆ ?

8. ಮುಖೇಶ್ ಅಂಬಾನಿ ಅವರಿಗೆ ನೀಡಲಾಗುವ ಝೆಡ್ ಭದ್ರತೆಗೆ  15 ಲಕ್ಷ ರೂ. ಪಾವತಿಸುತ್ತಿದ್ದಾರಂತೆ. ಟೈಮ್ಸ್ ನೌ ಸಂಪಾದಕ ಹಾಗೂ ಅವರ ಮಾಲಕರಾದ ಬೆನ್ನೆಟ್, ಕೋಲ್ಮೆನ್ ಆ್ಯಂಡ್ ಕೋ. ಲಿ. ಕೂಡ ಇದೇ ರೀತಿ ಹಣ ಪಾವತಿಸಬೇಕಾಗುತ್ತದೆಯೇ ?

9. ಸುರಕ್ಷಾ ಸಿಬ್ಬಂದಿಗೆ ಸಾಕಷ್ಟು ತರಬೇತಿ ಹಾಗೂ ಸೌಕರ್ಯಗಳನ್ನು ನೀಡಲಾಗಿದೆಯೇ? ಅವರ ಗುಂಡು ನಿರೋಧಕ ಕವಚಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತಿದೆಯೇ ? ಅವರಿಗೆ ಪೆಲೆಟ್ ಗನ್ ನಂತಹ ಅಪಾಯಕಾರಿಯಲ್ಲದ ಶಸ್ತ್ರಾಸ್ತ್ರಗಳನ್ನೂ ನೀಡಲಾಗಿದೆಯೇ?

ಕೃಪೆ:scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News