×
Ad

ಜನಾರ್ದನ ರೆಡ್ಡಿಯ ಮಗಳ ಮದುವೆಯ ಆಮಂತ್ರಣ ಪತ್ರಿಕೆ, ಅಲ್ಲಲ್ಲ ಆಮಂತ್ರಣ ವೀಡಿಯೊ !

Update: 2016-10-18 22:31 IST



 

ಬಳ್ಳಾರಿ, ಅ.18: ಬಳ್ಳಾರಿಯ ‘ಗಣಿ ದಣಿ’, ಕರ್ನಾಟಕದ ಕೋಟ್ಯಧಿಪತಿ ಗಾಲಿ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಗೆ ಎಲ್ಲರಿಗೂ ಆಮಂತ್ರಿಸಿದ್ದಾರೆ. ಅದು ಮದುವೆ ಕರೆಯೋಲೆ ನೀಡುವ ಮೂಲಕವಲ್ಲ. ಬದಲಿಗೆ ವಿಡಿಯೋ ದೃಶ್ಯದ ಮೂಲಕ ಎಲ್ಲರಿಗೂ ಆಹ್ವಾನ ನೀಡಿ ವಿಭಿನ್ನತೆ ಮೆರೆದಿದ್ದಾರೆ.

ಮದುವೆ ಆಮಂತ್ರಣದ ವಿಡಿಯೋ ನಿಮಿಷಕ್ಕಿಂತಲೂ ಹೆಚ್ಚು ಕಾಲ ಓಡುತ್ತದೆ. ವಿಡಿಯೋದಲ್ಲಿ ರೆಡ್ಡಿ, ಅವರ ಪತ್ನಿ ಹಾಗೂ ಮಗಳು ಬ್ರಾಹ್ಮಿಣಿ, ವರ ರಾಜೀವ್ ರೆಡ್ಡಿ ಅವರಿದ್ದಾರೆ. ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಕನ್ನಡ ಗೀತೆಯೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಮದುವೆಗೋಸ್ಕರವೇ ಗೀತೆಯೊಂದನ್ನು ವಿಶೇಷವಾಗಿ ರಚಿಸಲಾಗಿದೆ. ನ.16 ರಂದು ನಿಗದಿಯಾಗಿರುವ ರೆಡ್ಡಿ ಮಗಳ ಅದ್ದೂರಿ ಮದುವೆಯಲ್ಲಿ ಬಾಲಿವುಡ್ ,ಕಾಲಿವುಡ್ ನಟ-ನಟಿಯರಾದ ಶಾರುಕ್ ಖಾನ್, ಪ್ರಭುದೇವ, ತಮನ್ನಾ, ಕತ್ರಿನಾ  ಕೈಫ್  ಕಾರ್ಯಕ್ರಮ ನೀಡಲಿದ್ದಾರೆ ಎನ್ನಲಾಗಿದೆ.

Full View

Courtesy : thenewsminute.com 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News