ಕಾಂಗ್ರೆಸ್ ಪಕ್ಷದ ಸಿದ್ಧಾಂತ ಅರಿತು ಪಕ್ಷ ಬಲವರ್ಧಿಸಿ: ವಿಜಯ ಕುಮಾರ್
ಮೂಡಿಗೆರೆ, ಅ.19: ಕಾಂಗ್ರೆಸ್ ಪಕ್ಷವು ಬಡವರಿಗಾಗಿ ದುಡಿದ ಪಕ್ಷ. ಪಕ್ಷದ ಸಿದ್ಧಾಂತವನ್ನು ಅರಿತು ಪಕ್ಷ ಸಂಘಟಿಸಲು ಕಾರ್ಯಕರ್ತರು ಹಕರಿಸಬೇಕೆಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಡಾ.ಡಿ.ಎಲ್.ವಿಜಯ ಕುಮಾರ್ ಹೇಳಿದರು.
ಅವರು ಬಣಕಲ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಬಣಕಲ್ ಹೋಬಳಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಕ್ಷ ಏಳಿಗೆಯಾಗಬೇಕಾದರೆ ನಾಯಕತ್ವಕ್ಕೆ ಹೊಂದಾಣಿಕೆಯಾಗುವ ಮಂಚೂಣಿ ಯಲ್ಲಿರುವ ನಾಯಕರ ಆವಶ್ಯಕತೆಯಿತ್ತು. ಅದರಂತೆ ಸರ್ವರೂ ಒಗ್ಗಟ್ಟಾಗಿ ಸುಬ್ರಹ್ಮಣ್ಯ ರವರನ್ನು ಆಯ್ಕೆ ಮಾಡಿದ್ದೇವೆ. ಅವರು ಇಂತಹ ಜವಾಬ್ದಾರಿಯುತ ಕೆಲಸ ಮಾಡಿ ಪಕ್ಷ ಕಟ್ಟಲು ಸಹಕರಿಸುತ್ತಾರೆಂಬ ವಿಶ್ವಾಸ ನಮಗಿದೆ ಎಂದರು.
ಎಂಎಲ್ಸಿ ಮೋಟಮ್ಮ ಮಾತನಾಡಿ, ಜನರಿಗೆ ಅನೇಕ ಯೋಜನೆಗಳ ಸದ್ಬಳಕೆ ಬಗ್ಗೆ ಜನ ಜಾಗೃತಿ ಮೂಡಿಸಿ ಪಕ್ಷದಗೆಲುವಿಗಾಗಿ ದುಡಿಯಬೇಕಿದೆ. ಕಾಂಗ್ರೆಸ್‌ಪಕ್ಷ ಭ್ರಷ್ಟಾಚಾರವಿಲ್ಲದ ಪಕ್ಷ. ಕಾರ್ಯಕರ್ತ ರು ಈ ನಿಟ್ಟಿನಲ್ಲಿ ಜನಪರ ಕೆಲಸ ಮಾಡಿ ಪಕ್ಷದ ವರ್ಚಸ್ಸಿಗೆ ದುಡಿಯ ಬೇಕಿದೆ. ನಾಯಕರು ದೇಶವನ್ನು ಕಟ್ಟುವ ಕೆಲಸ ಮಾಡಬೇಕೆಂದು ವಿವೇಕಾನಂದರು ಹೇಳುತ್ತಿದ್ದರು. ಅವರ ಮಾರ್ಗದರ್ಶನ ಪಾಲಿಸಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ನ ಮಾಜಿ ಬ್ಲಾಕ್ ಅಧ್ಯಕ್ಷ ಮತ್ತು ಕಾಫಿ ಬೆಳೆಗಾರ ಬಿ.ಎಸ್. ಜಯರಾಮ್ ಗೌಡ ಮಾತನಾಡಿ, ಪಕ್ಷದಲ್ಲಿ ಗೊಂದಲವನ್ನು ಹೋಗಲಾಡಿಸಿ ಕಾರ್ಯಕರ್ತರು ಶ್ರಮಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಜಯ ಸಿಗಲಿದೆ. ಉತ್ಸಾಹಿ ಯುವಕರು ಪಕ್ಷದ ಬೆನ್ನೆಲುಬಾಗಿ ನಿಂತರೆ ಕಾಂಗ್ರೆಸ್ ಪಕ್ಷ ಸದೃಢವಾಗುತ್ತದೆ. ಗ್ರಾಮದ ರಸ್ತೆಗಳು ಕೂಡ ಹದಗೆಟ್ಟಿದ್ದು ಇದನ್ನು ಜಿಲ್ಲಾಧ್ಯಕ್ಷರು ಪರಿಗಣಿಸಿ ರೈತರ ಪರ ನಿಲ್ಲಬೇಕೆಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಕೆ.ಆರ್.ಸುಂದರೇಶ್‌ಗೌಡ ನೂತನ ಅಧ್ಯಕ್ಷ ಸುಬ್ರಹ್ಮಣ್ಯ ತ್ರಿಪುರ ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕಾರ ವಹಿಸಿಕೊಟ್ಟರು. ಹಿರಿಯ ಮುಖಂಡರಾದ ಪ್ರ.ಕಾರ್ಯದರ್ಶಿ ಶಿವಾನಂದ ಸ್ವಾಮಿ, ಒ.ಎಸ್.ಗೋಪಾಲ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್, ಲಕ್ಷ್ಮಣ್‌ಗೌಡ, ಅತೀಕ್ ಕೈಸರ್, ನಿಕಟ ಪೂರ್ವ ಅಧ್ಯಕ್ಷ ಕೆ.ಆರ್.ಸುಂದರೇಶ್, ನೂತನ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯ ತ್ರಿಪುರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೊರಟ್ಟಿ ನೂತನ ಹೋಬಳಿ ಅಧ್ಯಕ್ಷ ಸಂದೇಶ್, ಮಲ್ಲೇಶ್, ಮಹಿಳಾ ಕಾಂಗ್ರೆಸ್‌ನ ನಯನಾ, ಸಿ.ಕೆ.ಇಬ್ರಾಹೀಂ, ಉದಯಶಂಕರ, ರಾಜಮ್ಮ, ಕೃಷ್ಣೇಗೌಡ ಬಾಳೂರು, ಸಂಪತ್ ಕುಮಾರ್, ಮನುಗೌಡ, ನಾಗೇಶ್‌ಗೌಡ, ಅನಂತ್, ದೇವರಾಜ್, ಗಂಗು,ಪಲ್ಗುಣಿ ಪಂಚಾಯತ್ ಅಧ್ಯಕ್ಷೆ ಕೋಮಲಾಕಮಲಾಕ್ಷಮ್ಮ, ಜಯಮ್ಮ, ಮದೀಶ್, ಇರ್ಶಾದ್, ರುದ್ರಯ್ಯ, ಕಾರ್ಯದರ್ಶಿ ಉಮ್ಮರ್, ಜಯಣ್ಣ, ದಿಲ್‌ದಾರ್‌ಬೇಗಂ, ಆದಿತ್ಯ, ಗೌತಮ್, ಬಣಕಲ್ ಗ್ರಾಪಂ ಉಪಾಧ್ಯಕ್ಷೆ ಸರೋಜಾ, ಶಿವರಾಂ ಶೆಟ್ಟಿ, ಅಹ್ಮದ್ ಬಾವ, ನಾಗೇಶ್‌ಗೌಡ, ಸುರೇಂದ್ರ ಬಾಳೂರು ಹಾಜರಿದ್ದರು. ಮನೋಜ್ ಸ್ವಾಗತಿಸಿ, ಇರ್ಫಾನ್ ವಂದಿಸಿದರು. ಸಬ್ಲಿ ದೇವರಾಜ್ ನಿರೂಪಿಸಿದರು.