×
Ad

ಟಿ.ಪಿ. ಪ್ರದೀಪ್‌ಗೆ ಡಾಕ್ಟರೇಟ್ ಗೌರವ

Update: 2016-10-20 22:15 IST

ತರೀಕೆರೆ, ಅ.20: ಪಟ್ಟಣದ ಪುಟ್ಟನಾಯ್ಕನ ಬೀದಿ ವಾಸಿಯಾಗಿರುವ ನಿವೃತ್ತ ಸೈನಿಕ ಪಾಲಾಕ್ಷಪ್ಪ ಹಾಗೂ ಇಂದ್ರಮ್ಮ ದಂಪತಿಯ ಪುತ್ರ ಟಿ.ಪಿ.ಪ್ರದೀಪ್‌ಗೆ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‌ನ ಐಐಟಿ ಸಂಸ್ಥೆಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಟಿ.ಪಿ. ಪ್ರದೀಪ್ ಜೈವಿಕ ತಂತ್ರಜ್ಞಾನ ವಿಷಯ ಕುರಿತು ಪಿಎಚ್‌ಡಿ ಅಧ್ಯಯನ ಕೈಗೊಂಡಿದ್ದು ಪ್ರಬಂಧ ಮಂಡಿಸಿರುತ್ತಾರೆ. ಟಿ.ಪಿ.ಪ್ರದೀಪ್‌ರನ್ನು ಮಾಜಿ ಪುರಸಭೆ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮಾ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹಾಲವಜ್ರಪ್ಪ, ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್ ಹಾಗೂ ಸಹ ಕಾರ್ಯದರ್ಶಿ ಮಧುಸೂದನ್ ಕಕ್ರಿ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News