ಪರಿಣಾಮ ಸರಿ ಇರಲ್ಲ: ನಿರಂಜನಾನಂದ ಸ್ವಾಮೀಜಿ

Update: 2016-10-20 17:05 GMT

ದಾವಣಗೆರೆ, ಅ.20: ‘ಕನಕ ನಡೆ ಉಡುಪಿ ಕಡೆಗೆ’ ಹೋರಾಟಕ್ಕೆ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

 ಇಲ್ಲಿನ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಕನಕಗುರುಪೀಠದ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಶ್ರೀಗಳು, ‘ಕನಕ ನಡಿಗೆ ಉಡುಪಿ ಕಡೆಗೆ’ ಹೋರಾಟವು ದಲಿತರು ಹಾಗೂ ಕುರುಬರ ನಡುವೆ ಕದನ ಹಚ್ಚಲು ಪುರೋಹಿತ ಶಾಹಿಗಳು ಮಾಡುತ್ತಿರುವ ಕುತಂತ್ರ ಎಂದಿದ್ದಾರೆ.

ಲಿತರ ‘ಚಲೋ ಉಡುಪಿ’ ಕಾರ್ಯಕ್ರಮ ವಿರೋಧಿಸಿ ಅ. 23ರಂದು ಕೆಲ ಸಂಘಟನೆಗಳು ‘ಕನಕ ನಡೆ ಉಡುಪಿಯ ಕಡೆ’ ಎಂದು ಉಡುಪಿ ಸ್ವಚ್ಛ ಮಾಡುವ ಕಾರ್ಯಕ್ರಮ ಹಾಕಿಕೊಂಡಿವೆ. ಉಡುಪಿ ಸ್ವಚ್ಛ ಮಾಡುವ ಮೊದಲು ಅವರ ಕೊಳಕು ಮನಸ್ಸುಗಳನ್ನು ಸ್ವಚ್ಛ ಮಾಡಿಕೊಳ್ಳಲಿ ಎಂದು ಸ್ವಾವಿುೀಜಿ ಖಾರವಾಗಿ ನುಡಿದಿದ್ದಾರೆ.

ಈ ಕಾರ್ಯಕ್ರಮಕ್ಕೆ ಪೇಜಾವರ ಸ್ವಾಮೀಜಿ ಕೂಡಾ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ನಿಮಗೆ ತಾಕತ್ತಿದ್ದರೆ ಕೃಷ್ಣ ಮಂದಿರದ ಹೊರಗೆ ಇರುವ ಕನಕನನ್ನು ದೇವಾಲಯ ಒಳಗೆ ಪ್ರತಿಷ್ಠಾನೆ ಮಾಡಿ. ಇದನ್ನು ಬಿಟ್ಟು ದಲಿತರ ವಿರುದ್ಧ ಹೋರಾಟ ಮಾಡಲು ಕನಕನ ಹೆಸರು ಬಳಸಿದರೆ ಪರಿಣಾಮ ಸರಿ ಇರಲ್ಲ ಎಂದು ಪೇಜಾವರ ಸ್ವಾಮಿಜಿಗೆ ನಿರಂಜನಾನಂದ ಸ್ವಾಮೀಜಿ ಸವಾಲೆಸೆದಿದ್ದಾರೆ.

ಆ ಕಾರ್ಯಕ್ರಮದಲ್ಲಿ ಕನಕನ ಹೆಸರು ಬಳಸ ಬಾರದು ಎಂದು ತಾಕೀತು ಮಾಡಿರುವ ನಿರಂಜ ನಾನಂದ ಸ್ವಾಮೀಜಿ, ಶೋಷಿತರ ನಡುವೆ ಜಗಳ ಹಚ್ಚುವ ಪುರೋಹಿತ ಶಾಹಿಗಳ ಹಿಡನ್ ಅಜಂಡಾ ಇರುವುದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News